Publish Date: Fri, 02 Oct 2020 (11:15 IST)
Updated Date: Fri, 02 Oct 2020 (11:16 IST)
ಬೆಂಗಳೂರು: ಲಾಕ್ ಡೌನ್ ಬ್ರೇಕ್ ನ ಬಳಿಕ ಚಾರ್ಲಿ 777 ಚಿತ್ರದ ಚಿತ್ರೀಕರಣಕ್ಕೆ ರಕ್ಷಿತ್ ಶೆಟ್ಟಿ ಮತ್ತು ಬಳಗ ಅಣಿಯಾಗುತ್ತಿದೆ.
ಈಗಾಗಲೇ ಶೇ. 75 ರಷ್ಟು ಚಿತ್ರೀಕರಣ ಮುಗಿಸಿರುವ ಚಾರ್ಲಿ 777 ಉಳಿದ ಭಾಗದ ಚಿತ್ರೀಕರಣ ಪ್ರಾರಂಭಿಸುತ್ತಿರುವುದಾಗಿ ನಿರ್ದೇಶಕ ಕಿರಣ್ ರಾಜು ಕೆ ಘೋಷಿಸಿದ್ದಾರೆ. ಆರು ತಿಂಗಳ ಸುದೀರ್ಘ ವಿರಾಮದ ಬಳಿಕ ಚಿತ್ರೀಕರಣಕ್ಕೆ ಸಜ್ಜಾಗಿದ್ದು ನಿಮ್ಮೆಲ್ಲರ ಆಶೀರ್ವಾದ, ಪ್ರೀತಿ ನಮ್ಮ ಮೇಲಿರಲಿ ಎಂದು ಕೇಳಿಕೊಂಡಿದ್ದಾರೆ. ಈಗಾಗಲೇ ಟೀಸರ್ ಹೊರಬಿಟ್ಟಿರುವ ಚಿತ್ರತಂಡ ಚಿತ್ರದ ಬಗ್ಗೆ ಸಾಕಷ್ಟು ಕುತೂಹಲ ಸೃಷ್ಟಿ ಮಾಡಿದೆ.