Publish Date: Sun, 11 Oct 2020 (12:09 IST)
Updated Date: Sun, 11 Oct 2020 (12:11 IST)
ಬೆಂಗಳೂರು: ಲಾಕ್ ಡೌನ್ ಗಿಂತ ಮೊದಲು ಬಿಡುಗಡೆಯಾಗಿದ್ದ ಒಂದೊಂದೇ ಸಿನಿಮಾ ಮರು ರಿಲೀಸ್ ಆಗುವ ಸುದ್ದಿ ಬರುತ್ತಿದೆ. ಈ ಸಾಲಿಗೆ ಈಗ ಸೂಪರ್ ಹಿಟ್ ದಿಯಾ ಸಿನಿಮಾವೂ ಸೇರಿಕೊಂಡಿದೆ.
ದಸರಾ ವೇಳೆಗೆ ದಿಯಾ ಮರು ರಿಲೀಸ್ ಆಗಲಿದ್ದು, ಈ ಬಾರಿ ಕೊಂಚ ಬದಲಾವಣೆಯನ್ನೂ ನಿರೀಕ್ಷಿಸಬಹುದು. ಕೆಲವು ಹಾಡುಗಳ ಮರು ಸೇರ್ಪಡೆ ಜತೆಗೆ ಸಿನಿಮಾ ಮತ್ತೆ ರಿಲೀಸ್ ಆಗಲಿದೆ. ಹೀಗಾಗಿ ಪ್ರೇಕ್ಷಕರು ಮತ್ತೆ ಸಿನಿಮಾ ನೋಡುವಂತೆ ಮಾಡಲಾಗುತ್ತಿದೆ. ಪೃಥ್ವಿ ಅಂಬರ್, ದೀಕ್ಷಿತ್ ಶೆಟ್ಟಿ, ಖುಷಿ ರವಿ ಮುಂತಾದವರು ನಟಿಸಿದ್ದ ದಿಯಾ ಜನ ಮೆಚ್ಚುಗೆಗೆ ಪಾತ್ರವಾಗಿತ್ತು.