Select Your Language

Notifications

webdunia
webdunia
webdunia
webdunia

ಇನ್ನು ಎಂಟು ವರ್ಷಗಳ ಬಳಿಕ ಬೆಂಗಳೂರಿಗೆ ಗುಡ್ ಬೈ ಹೇಳುತ್ತಾರಂತೆ ಜಗ್ಗೇಶ್!

ಇನ್ನು ಎಂಟು ವರ್ಷಗಳ ಬಳಿಕ ಬೆಂಗಳೂರಿಗೆ ಗುಡ್ ಬೈ ಹೇಳುತ್ತಾರಂತೆ ಜಗ್ಗೇಶ್!
ಬೆಂಗಳೂರು , ಶನಿವಾರ, 9 ಮೇ 2020 (08:51 IST)
ಬೆಂಗಳೂರು: ನವರಸನಾಯಕ ಜಗ್ಗೇಶ್ ತಮ್ಮ ಜೀವನದ ಆಗುಹೋಗುಗಳ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳೊಂದಿಗೆ ಮಾತನಾಡುತ್ತಲೇ ಇರುತ್ತಾರೆ. ಇದೀಗ ಲಾಕ್ ಡೌನ್ ಸಮಯದಲ್ಲಿ ಜಗ್ಗೇಶ್ ಹೊಸ ನಿರ್ಧಾರವೊಂದನ್ನು ಪ್ರಕಟಿಸಿದ್ದಾರೆ.


ಜಗ್ಗೇಶ್ ಗೆ ಈಗ 57 ವರ್ಷ ವಯಸ್ಸು. ಈಗಲೂ ವಿಭಿನ್ನ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಆದರೆ ಅವರಿಗೆ ಆಧ್ಯಾತ್ಮ, ಹಳ್ಳಿ ಜೀವನದ ಕಡೆಗೆ ಸಾಕಷ್ಟು ಒಲವಿದೆ ಎನ್ನುವುದು ಅವರ ಮಾತಿನಲ್ಲೇ ತಿಳಿಯುತ್ತದೆ.

ಹೀಗಾಗಿ ಇನ್ನು ಎಂಟು ವರ್ಷ ಬಳಿಕ ಅಂದರೆ ತಮ್ಮ 65 ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ ನಗರ ಜೀವನಕ್ಕೆ ಗುಡ್ ಬೈ ಹೇಳಿ ಸಂಪೂರ್ಣವಾಗಿ ಹಳ್ಳಿಗೆ ವಲಸೆ ಹೋಗುವೆ ಎಂದು ಜಗ್ಗೇಶ್ ಪ್ರಕಟಿಸಿದ್ದಾರೆ. ನಗರ ಜೀವನದ ನಾಟಕ, ಸ್ವಾರ್ಥ ಸಾಕಾಗಿದೆ. ಹಳ್ಳಿ ಜೀವನ ಅದ್ಭುತ. ಹೀಗಾಗಿ ಸಂಪೂರ್ಣ ಹಳ್ಳಿಗೆ ವಲಸೆ ಹೋಗುವೆ ಎಂದು ಜಗ್ಗೇಶ್ ಪ್ರಕಟಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜ್ಯೂ. ಎನ್ ಟಿಆರ್ ಗೆ ಸಿನಿಮಾ ಮಾಡಲಿರುವ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್?