Publish Date: Thu, 07 May 2020 (09:47 IST)
Updated Date: Thu, 07 May 2020 (09:51 IST)
ಬೆಂಗಳೂರು: ನಟಿ ಕಾರುಣ್ಯ ರಾಮ್ ಕಾಂಗ್ರೆಸ್ ನಾಯಕ ಸಿದ್ಧರಾಮಯ್ಯ ಜತೆ ತೆಗೆಸಿಕೊಂಡ ಫೋಟೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದರು. ಅದೇ ಕಾರಣಕ್ಕೆ ಅವರೀಗ ಟ್ರೋಲ್ ಗೊಳಗಾಗಿದ್ದಾರೆ.
ಈ ಫೋಟೋದಲ್ಲಿ ಕಾರುಣ್ಯ ಮಾಸ್ಕ್ ಧರಿಸದೇ ಇರುವುದು ಟ್ರೋಲ್ ಗೊಳಗಾಗಲು ಕಾರಣ. ಸಿದ್ಧರಾಮಯ್ಯ ಮಾಸ್ಕ್ ಹಾಕಿಕೊಂಡಿದ್ದರೆ, ಅವರ ಜತೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ನಿಂತಿಕೊಂಡಿರುವ ಕಾರುಣ್ಯ ರಾಮ್ ರನ್ನು ನೆಟ್ಟಿಗರು ಲೇವಡಿ ಮಾಡಿದ್ದಾರೆ.
ಎಲ್ಲಾ ಸರಿ, ಸಾಮಾಜಿಕ ಅಂತರ, ಮಾಸ್ಕ್ ಎಲ್ಲಿ? ಫೋಟೋ ತೆಗೆಸಿಕೊಳ್ಳುವ ಖುಷಿಯಲ್ಲಿ ಇದೆಲ್ಲಾ ಮರೆತೇ ಬಿಟ್ಟಿರಾ ಎಂದು ಕಾರುಣ್ಯರನ್ನು ನೆಟ್ಟಿಗರು ಪ್ರಶ್ನಿಸಿದ್ದಾರೆ.