Publish Date: Thu, 07 May 2020 (09:06 IST)
Updated Date: Thu, 07 May 2020 (09:08 IST)
ಬೆಂಗಳೂರು: ಕೊರೋನಾ ಇನ್ನೂ ದೇಶದಲ್ಲಿ ಕಡಿಮೆಯಾಗಿಲ್ಲ. ಆದರೆ ಈಗಾಗಲೇ ಕಾರ್ಮಿಕರ ಹಿತದೃಷ್ಟಿಯಿಂದ ಧಾರವಾಹಿ ಶೂಟಿಂಗ್ ಗೆ ಅನುಮತಿ ನೀಡಲಾಗಿದೆ. ಆದರೆ ಸಿನಿಮಾಗೆ ಇನ್ನೂ ಅನುಮತಿ ಸಿಕ್ಕಿಲ್ಲ. ಈ ನಡುವೆ ನಟಿ, ಬಿಜೆಪಿ ನಾಯಕಿ ತಾರಾ ಮನವಿಯೊಂದನ್ನು ಮಾಡಿದ್ದಾರೆ.
ನಾವು ಈಗ ಒಬ್ಬ ಸಾರ್ವಜನಿಕರಾಗಿ ಜವಾಬ್ಧಾರಿಯುತವಾಗಿ ನಡೆದುಕೊಳ್ಳುವ ಅವಶ್ಯಕತೆಯಿದೆ. ಅದನ್ನು ಅರಿತುಕೊಂಡು ಸರ್ಕಾರದ ನಿರ್ಧಾರಕ್ಕಾಗಿ ಕಾಯಬೇಕು. ಶೂಟಿಂಗ್ ನಡೆಸಲು ಅವಸರ ಮಾಡುವುದು ಬೇಡ ಎಂಬುದು ನನ್ನ ಅಭಿಪ್ರಾಯ ಎಂದು ತಾರಾ ಹೇಳಿದ್ದಾರೆ.
ಅವಸರ ಮಾಡುವುದರಿಂದ ನಮ್ಮ ಆರೋಗ್ಯದ ಜತೆಗೆ ದೇಶದ ಆರೋಗ್ಯ ಹಾಳು ಮಾಡಿದಂತೆ. ಹೀಗಾಗಿ ವಿವೇಚನೆಯಿಂದ ನಡೆದುಕೊಳ್ಳುವುದು ನಮ್ಮೆಲ್ಲರ ಜವಾಬ್ಧಾರಿಯಾಗಿರುತ್ತದೆ ಎಂದು ತಾರಾ ಹೇಳಿದ್ದಾರೆ.