Publish Date: Sun, 14 Mar 2021 (10:42 IST)
Updated Date: Sun, 14 Mar 2021 (10:45 IST)
ಬೆಂಗಳೂರು: ಮೇಘನಾ ಸರ್ಜಾಗೆ ಮಲಯಾಳಂ ಚಿತ್ರರಂಗದ ಸ್ಟಾರ್ ನಟರೂ ಸ್ನೇಹಿತರು. ಇದೀಗ ಮೇಘನಾ ಮನೆಗೆ ಮಲಯಾಳಂ ನಟ ಇಂದ್ರಜಿತ್ ಸುಕುಮಾರ್ ಭೇಟಿ ನೀಡಿದ್ದಾರೆ.
ಮಲಯಾಳಂನಲ್ಲಿಯೂ ನಟಿಸಿರುವ ಮೇಘನಾ ಮನೆಗೆ ಈಗ ನಟ ಇಂದ್ರಜಿತ್ ಭೇಟಿ ಕುಟುಂಬ ಸದಸ್ಯರೊಂದಿಗೆ ಕೆಲವು ಕಾಲ ಕಳೆದಿದ್ದಾರೆ. ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ಮೇಘನಾ ಬೇಬಿ ಚಿರುವಿಗೆ ನಿಮ್ಮ ಆಗಮನ ಖುಷಿ ನೀಡಿದೆ ಮತ್ತು ನಮ್ಮ ಬಿರಿಯಾನಿ ಆತಿಥ್ಯ ನಿಮಗೆ ಇಷ್ಟವಾಗಿರಬಹುದು ಎಂದು ಬರೆದುಕೊಂಡಿದ್ದಾರೆ.
ನಟ ಪೃಥ್ವಿ ರಾಜ್ ಸಹೋದರರಾಗಿರುವ ಇಂದ್ರಜಿತ್ ಮಲಯಾಳಂನ ಜನಪ್ರಿಯ ನಟ. ಮೆಮೊರಿಸ್ ಸಿನಿಮಾದಲ್ಲಿ ಮೇಘನಾ ಪೃಥ್ವಿ ರಾಜ್ ಗೆ ನಾಯಕಿಯಾಗಿ ಅಭಿನಯಿಸಿದ್ದರು.