Publish Date: Sun, 14 Mar 2021 (09:01 IST)
Updated Date: Sun, 14 Mar 2021 (09:02 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಮೊದಲೆರಡು ದಿನಗಳಲ್ಲೇ ಕೋಟಿ ಕೋಟಿ ಬಾಚಿಕೊಂಡು ಭರ್ಜರಿ ಹಿಟ್ ಆಗಿದೆ.
ಮೊದಲ ದಿನದಲ್ಲಿ ಕನ್ನಡದಲ್ಲಿ 17 ಕೋಟಿ ರೂ., ತೆಲುಗಿನಲ್ಲಿ 3 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ 20 ಕೋಟಿ ರೂ. ಬಾಚಿ ದಾಖಲೆ ಮಾಡಿತ್ತು. ಎರಡನೇ ದಿನವೂ ರಾಬರ್ಟ್ ಸಕ್ಸಸ್ ಓಟ ಮುಂದುವರಿದಿದೆ. ಎರಡನೇ ದಿನ 12 ಕೋಟಿ ರೂ. ಕಲೆಕ್ಷನ್ ಮಾಡಿತ್ತು.
ಗಮನಾರ್ಹವೆಂದರೆ ಶನಿವಾರ ಮತ್ತು ಭಾನುವಾರ ವೀಕೆಂಡ್ ನಲ್ಲಿ ಗಳಿಕೆ ಮತ್ತಷ್ಟು ಹೆಚ್ಚಾಗಲಿದೆ. ಆ ಮೂಲಕ ನಾಲ್ಕು ದಿನದಲ್ಲೇ 50 ಕೋಟಿ ಕ್ಲಬ್ ಸೇರಿಕೊಳ್ಳುವುದು ಪಕ್ಕಾ ಆಗಿದೆ. ಡಿ ಬಾಸ್ ದರ್ಶನ್ ರನ್ನು ಬಾಕ್ಸ್ ಆಫೀಸ್ ಸುಲ್ತಾನ್ ಎಂದು ಅಭಿಮಾನಿಗಳು ಪ್ರೀತಿಯಿಂದ ಕರೆಯುತ್ತಾರೆ. ಅದನ್ನು ಅವರು ಈ ಸಿನಿಮಾ ಮೂಲಕ ಮತ್ತೆ ಪ್ರೂವ್ ಮಾಡಿದ್ದಾರೆ.