Select Your Language

Notifications

webdunia
webdunia
webdunia
webdunia

ರೇಣುಕಾಸ್ವಾಮಿಯಿಂದ ನನಗೂ ಅಶ್ಲೀಲ ಸಂದೇಶ ಬಂದಿದೆ: ನಟಿ ಚಿತ್ರಾಲ್ ರಂಗಸ್ವಾಮಿ ಆರೋಪ

Actress Chitral Rangaswamy

Sampriya

ಬೆಂಗಳೂರು , ಸೋಮವಾರ, 24 ಜೂನ್ 2024 (14:02 IST)
Photo Courtesy X
ಬೆಂಗಳೂರು: ದರ್ಶನ್ ಗ್ಯಾಂಗ್‌ನಿಂದ ಹತ್ಯೆಗೀಡಾದ ಚಿತ್ರಾದುರ್ಗಾದ ರೇಣುಕಸ್ವಾಮಿ ನನಗೂ ಕೂಡ ಫೇಕ್ ಅಕೌಂಟ್‌ನಿಂದ ಅಶ್ಲೀಲ ಸಂದೇಶ ಕಳುಹಿಸಿರುವುದಾಗಿ ಕಿರುತೆರೆ ನಟಿ ಚಿತ್ರಾಲ್ ರಂಗಸ್ವಾಮಿ ಹೇಳಿಕೊಂಡಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿ ಹಂಚಿಕೊಂಡಿರುವ ಅವರು ರೇಣುಕಸ್ವಾಮಿ ಕೃತ್ಯಗಳ ಬಗ್ಗೆ ವಿವರ ಕೊಟ್ಟಿದ್ದಾರೆ. ನಾನು ಯಾರ ಪರವಾಗಿಯೋ, ವಿರುದ್ಧವಾಗಿಯೋ ಮಾತನಾಡಲು ಬಂದಿಲ್ಲ, ರೇಣುಕಾಸ್ವಾಮಿ ಕುಟುಂಬಕ್ಕೆ ದೇವರು ಶಕ್ತಿ ಕೊಡಲಿ ಎಂದಿರುವ ಅವರು, ಈ ಅಕೌಂಟ್‌ ಬಗ್ಗೆ ಸುದ್ದಿಗಳಲ್ಲಿ ನೋಡಿದಾಗ ನನಗೂ ಈ ರೀತಿ ಮೆಸೇಜ್ ಬಂದಿರುವುದು ನೆನಪಿಗೆ ಬಂತು ಎಂದು ಹೇಳಿದ್ದಾರೆ.

ಮಾಧ್ಯಮದಲ್ಲಿ ಆ ಹೆಸರನ್ನು ನೋಡಿದಾಗ ನನಗೆ ಭಯವಾಯಿತು, ನನ್ನ ಬ್ಲಾಕ್‌ ಲಿಸ್ಟ್ ಪರಿಶೀಲಿಸಿದಾಗ ಅದೇ ಅಕೌಂಟ್‌ನಿಂದ ಕೆಟ್ಟ ಮೆಸೇಜ್ ಬಂದಿದೆ. ನನಗೆ ನಗ್ನ ಚಿತ್ರಗಳನ್ನು ಕಳಿಸಿದರೆ ಬ್ಲಾಕ್ ಮಾಡುತ್ತೇನೆ ಎಂದರು.

ಗೌತಮ್ ಕೆಎಸ್‌ 1990 ಎನ್ನುವ ಹೆಸರಿನಲ್ಲಿ ರೇಣುಕಾಸ್ವಾಮಿ ಅವರದ್ದು ಒಂದು ಫೇಕ್ ಅಕೌಂಟ್ ಇತ್ತು ಎಂದು ನಾನು ಒಂದು ನ್ಯೂಸ್‌ನಲ್ಲಿ ನೋಡ್ದೆ. ಈ ಅಕೌಂಟ್ ಇಂದ ಅದೇ ರೀತಿಯ ಕೆಟ್ಟ ಮೆಸೇಜ್‌ಗಳನ್ನು ಇನ್ನು ಸಾಕಷ್ಟು ಜನರಿಗೆ ಕಳುಹಿಸಿದ್ದರಂತೆ. ನನಗೆ ಅಚ್ಚರಿ ಆಯಿತು. ನಾನು ಅದರ ಸ್ಕ್ರೀನ್‌ ಶಾಟ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡರೆ ತಪ್ಪಾಗುತ್ತದೆ. ಹಾಗಾಗಿ ಹಾಕಲಿಲ್ಲ ಎಂದರು.




Share this Story:

Follow Webdunia kannada

ಮುಂದಿನ ಸುದ್ದಿ

ಪತಿ ದರ್ಶನ್ ನೋಡಲು ಬಂದು ಅರ್ಧಕ್ಕೇ ವಾಪಸ್ ಆದ ವಿಜಯಲಕ್ಷ್ಮಿ