Select Your Language

Notifications

webdunia
webdunia
webdunia
Wednesday, 23 April 2025
webdunia

ಕನ್ನಡ ನಟಿಯರಿಗೆ ಮೇಣದ ಪ್ರತಿಮೆ ಗೌರವ ಯಾಕಿಲ್ಲ? ನಟಿ ಹರಿಪ್ರಿಯಾ ಆಕ್ಷೇಪ

ಹರಿಪ್ರಿಯಾ
ಬೆಂಗಳೂರು , ಗುರುವಾರ, 6 ಫೆಬ್ರವರಿ 2020 (09:59 IST)
ಬೆಂಗಳೂರು: ಮೇಡಮ್ ಟುಸ್ಸಾಡ್ ನಲ್ಲಿ ತೆಲುಗು ನಟಿ ಕಾಜಲ್ ಅಗರ್ವಾಲ್ ಮೇಣದ ತದ್ರೂಪಿ ಪ್ರತಿಮೆ ಅನಾವರಣಗೊಂಡ ಬಳಿಕ ನಟಿ ಹರಿಪ್ರಿಯಾ ಕನ್ನಡ ನಟಿಯರಿಗೆ ಗೌರವ ಸಿಗದೇ ಇರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.


ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸುದೀರ್ಘವಾಗಿ ಬರೆದುಕೊಂಡಿರುವ ಹರಿಪ್ರಿಯಾ ಕನ್ನಡ ನಟ-ನಟಿಯರು ಸಾಧನೆ ಮಾಡಿದರೂ ಯಾಕೆ ಯಾರೂ ಗುರುತಿಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

‘ಯುವ ಕಲಾವಿದರನ್ನು ಗುರುತಿಸಿ ಈ ರೀತಿ ಗೌರವಿಸುತ್ತಿರುವುದು ಸಂತೋಷದ ಸಂಗತಿ. ಆದರೆ ಇವರಿಗೆ ಯಾರಿಗೂ ಕನ್ನಡದ ಸಾಧಕರು ಯಾಕೆ ಕಣ್ಣಿಗೆ ಕಾಣುತ್ತಿಲ್ಲ? ನಮ್ಮಲ್ಲಿ ಡಾ. ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್ ಸರ್, ಶಂಕರ್ ನಾಗ್  ಸರ್, ಪಂಡರೀಬಾಯಿ ಮೇಡಂ, ಜಯಂತಿ ಮೇಡಂ, ಬಿ ಸರೋಜದೇವಿ ಮೇಡಂ, ಕಲ್ಪನಾ ಮೇಡಂ, ಮಂಜುಳ ಮೇಡಂ ಹೀಗೆ ಪಟ್ಟಿ ಉದ್ದವಿದೆ. ಈ ಯುವ ಕಲಾವಿದರಿಗಿಂತಲೂ ಈ ಹಿರಿಯ ಕಲಾವಿದರಿಗೆ ಈ ಗೌರವ ಸಲ್ಲಬೇಕಲ್ಲವೇ? ಕನ್ನಡದ ಹಿರಿಯರನ್ನು ಯಾಕೆ ಅಲಕ್ಷಿಸಲಾಗುತ್ತಿದೆ? ನನ್ನ ಅಭಿಪ್ರಾಯ ನಿಮಗೂ ಸರಿಯೆನಿಸುತ್ತಿಲ್ಲವೇ?’ ಎಂದು ಹರಿಪ್ರಿಯಾ ಸುದೀರ್ಘವಾಗಿ ಬರೆದುಕೊಂಡು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಹಲವು ಬೆಂಬಲ ವ್ಯಕ್ತಪಡಿಸಿ ಕಾಮೆಂಟ್ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಿವಾಜಿ ಸುರತ್ಕಲ್ ಟ್ರೈಲರ್ ಇಂದೇ ನೋಡಿ