Select Your Language

Notifications

webdunia
webdunia
webdunia
webdunia

ಸದ್ಯದಲ್ಲೇ ಹಸೆಮಣೆ ಏರಲಿದ್ದಾರಂತೆ ನಟಿ ಕಾಜಲ್ ಅಗರ್ವಾಲ್

ಕಾಜಲ್ ಅಗರ್ವಾಲ್
ಹೈದರಾಬಾದ್ , ಶನಿವಾರ, 2 ನವೆಂಬರ್ 2019 (07:30 IST)
ಹೈದರಾಬಾದ್: ಬಟ್ಟಲುಗಣ್ಣುಗಳ ಚೆಲುವೆ ಕಾಜಲ್ ಅಗರ್ವಾಲ್ ಸದ್ಯದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ರೂಮರ್ ಹಬ್ಬಿದೆ.


ಇದಕ್ಕೆ ಕಾರಣವಾಗಿದ್ದು ಕಾಜಲ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮದುವೆ ಬಗ್ಗೆ ನೀಡಿದ ಹೇಳಿಕೆ. ಸಂದರ್ಶಕರು ಮದುವೆ ಬಗ್ಗೆ ಕೇಳಿದಾಗ ಕಾಜಲ್ ಸದ್ಯದಲ್ಲೇ ಮದುವೆಯಾಗುತ್ತಿರುವುದಾಗಿ ಹೇಳಿದ್ದಾರೆ. ಆದರೆ ಹುಡುಗ ಯಾರು ಎಂದು ಬಹಿರಂಗಪಡಿಸಿಲ್ಲ.

ಆದರೆ ಮೂಲಗಳ ಪ್ರಕಾರ ಕಾಜಲ್ ಪೋಷಕರು ಈಗಾಗಲೇ ವರನನ್ನು ನಿಶ್ಚಯಿಸಿದ್ದಾರಂತೆ. ಅದರಂತೆ ಉದ್ಯಮಿಯೊಬ್ಬರ ಕೈ ಹಿಡಿಯಲಿದ್ದಾರಂತೆ. ಇದು ಪಕ್ಕಾ ಅರೇಂಜ್ಡ್ ಮದುವೆಯಾಗಲಿದೆ ಎನ್ನಲಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ಮನೆಯಿಂದ ಇಂದು ಹೊರಹೋಗುವವರು ಯಾರು?