Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಮನೆಯಿಂದ ಇಂದು ಹೊರಹೋಗುವವರು ಯಾರು?

ಬಿಗ್ ಬಾಸ್ ಮನೆಯಿಂದ ಇಂದು ಹೊರಹೋಗುವವರು ಯಾರು?
ಬೆಂಗಳೂರು , ಶನಿವಾರ, 2 ನವೆಂಬರ್ 2019 (07:24 IST)
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಶೋನಲ್ಲಿ ಇಂದು ವಾರದ ಕತೆ ಕಿಚ್ಚನ ಜತೆ ನಡೆಯಲಿದ್ದು, ಎಲಿಮಿನೇಷನ್ ಪ್ರಕ್ರಿಯೆ ನಡೆಯಲಿದೆ.


ಮೂರನೇ ವಾರದ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಮನೆಯಿಂದ ಹೊರಹೋಗುವವರು ಯಾರು ಎಂಬ ಕುತೂಹಲ ವೀಕ್ಷಕರಲ್ಲಿ ಮನೆ ಮಾಡಿದೆ. ಈ ವಾರ ಹೊರಹೋಗಲು ಸುಜಾತ, ಚಂದನ್ ಆಚಾರ್, ವಾಸುಕಿ ವೈಭವ್, ಪ್ರಿಯಾಂಕ, ರಾಜು ತಾಳಿಕೋಟೆ ನಾಮಿನೇಟ್ ಆಗಿದ್ದಾರೆ.

ಈ ಪೈಕಿ ಯಾರೇ ಹೊರಹೋದರೂ ಬಿಗ್ ವಿಕೆಟ್ ಬೀಳೋದು ಗ್ಯಾರಂಟಿ. ವಾಸುಕಿ ವೈಭವ್ ಗೆ ಉತ್ತಮ ಜನಾಭಿಪ್ರಾಯವಿದ್ದು, ಅವರು ಮನೆಯಲ್ಲಿ ಉಳಿದುಕೊಳ್ಳುವ ಸಾಧ‍್ಯತೆ ಹೆಚ್ಚು. ಉಳಿದ ಸ್ಪರ್ಧಿಗಳಲ್ಲಿ ಯಾರು ಹೊರಹೋಗಬಹುದು ಎಂಬುದೇ ಸದ್ಯದ ಕುತೂಹಲ.

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡದ ವಿಚಾರವಾಗಿ ಟ್ರೋಲ್ ಮಾಡಿದವರಿಗೆ ತಿರುಗೇಟು ಕೊಟ್ಟ ನಟ ಜೆಕೆ