ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಶಾಂತಿ ಕದಡೋ ಕೆಲಸ ಮಾಡೋರಿಗೆ ಏನೂ ಕಮ್ಮಿಯಿಲ್ಲ. ಸಣ್ಣ ಪುಟ್ಟ ವಿಚಾರಕ್ಕೆಲ್ಲಾ ಕಿರಿ ಕಿರಿಯಾಗುತ್ತಲೇ ಇರುತ್ತದೆ. ಆದರೆ ನಿನ್ನೆಯ ದಿನವಿಡೀ ಹರೀಶ್ ರಾಜ್ ಸುಮ್ ಸುಮ್ನೇ ಮಾಡಿದ ಕಿರಿಕ್ ನಿಂದ ಇಡೀ ಮನೆಯೇ ಛಿದ್ರವಾಯಿತು.
ಅಸಲಿಗೆ ಹರೀಶ್ ರಾಜ್ ಗೆ ಮನೆಯ ಶಾಂತಿ ಕದಡುವ ಕೆಲಸವನ್ನು ಬಿಗ್ ಬಾಸ್ ಕೊಟ್ಟಿದ್ದರು. ಕನ್ ಫೆಷನ್ ರೂಂಗೆ ಕರೆಸಿಕೊಂಡು ಬಿಗ್ ಬಾಸ್ ಹರೀಶ್ ರಾಜ್ ಗೆ ಟಾಸ್ಕ್ ಕೊಟ್ಟು ಈ ವಿಚಾರ ಗುಟ್ಟಾಗಿಡಲು ತಿಳಿಸಿದ್ದರು.
ಅದರಂತೆ ಹರೀಶ್ ಬೇಕೆಂದೇ ಕಿಚನ್ ಏರಿಯಾಗೆ ಬಂದು ಅಡುಗೆ ಕೆಲಸ ನಿಭಾಯಿಸುವ ಸುಜಾತ ಬಳಿ ಕಿರಿಕ್ ತೆಗೆದಿದ್ದಾರೆ. ಬೇಕೆಂದೇ ಅವರನ್ನು ಪ್ರಚೋದಿಸಿದ್ದಾರೆ. ನೀವು ನಮ್ಮನ್ನು ಡಾಮಿನೇಟ್ ಮಾಡ್ತಿದ್ದೀರಾ ಇದೆಲ್ಲಾ ಸರಿಯಲ್ಲ ಎಂದು ಕಿರುಚಾಡಿದ್ದಾರೆ.