ಅಮೃತಮತಿ ಪಾತ್ರಕ್ಕೆ ಒಂದೇ ದಿನದಲ್ಲಿ ಡಬ್ಬಿಂಗ್ ಮುಗಿಸಿದ ಹರಿಪ್ರಿಯಾ

ಗುರುವಾರ, 7 ನವೆಂಬರ್ 2019 (09:34 IST)
ಬೆಂಗಳೂರು: ನಟಿ ಹರಿಪ್ರಿಯಾ ಸದ್ಯಕ್ಕೆ ಕನ್ನಡದಲ್ಲಿ ಬ್ಯುಸಿ ನಟಿ. ವೈವಿದ್ಯಮಯ ಪಾತ್ರಗಳ ಮೂಲಕ ಮಿಂಚುತ್ತಿರುವ ಪಕ್ಕಾ ಕನ್ನಡತಿ ಹರಿಪ್ರಿಯಾ ಈಗ ಬರಗೂರು ರಾಮಚಂದ್ರಪ್ಪ ನಿರ್ದೇಶನದ ಅಮೃತಮತಿ ಸಿನಿಮಾ ಶೂಟಿಂಗ್ ಮುಗಿಸಿದ್ದಾರೆ.


ಈ ಸಿನಿಮಾ 13 ನೇ ಶತಮಾನದ ಕತೆಯನ್ನು ಒಳಗೊಂಡಿದೆ. ಹೀಗಾಗಿ ಇದು ಪಕ್ಕಾ ಡಿ ಗ್ಲಾಮರಸ್ ಪಾತ್ರ ಎನ್ನಬಹುದು. ಬರಗೂರು ಅವರ ಶೈಲಿಯ ಸಿನಿಮಾ ಇದಾಗಿದ್ದು, ಎರಡೇ ತಿಂಗಳಲ್ಲಿ ಚಿತ್ರೀಕರಣ ಮುಗಿದಿದೆ.

ಇದೀಗ ಹರಿಪ್ರಿಯಾ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಕೂಡಾ ಮುಗಿಸಿದ್ದಾರೆ. ಒಂದೇ ದಿನದಲ್ಲಿ ಡಬ್ಬಿಂಗ್ ಮುಗಿಸಿ ತಮ್ಮ ಪಾಲಿಗೆ ದಾಖಲೆಯನ್ನೂ ಮಾಡಿದ್ದಾರೆ. ಈ ಪಾತ್ರದ ಡೈಲಾಗ್ ಗಳು ಪಕ್ಕಾ ಕಾವ್ಯಾತ್ಮಕ ಕನ್ನಡದಲ್ಲಿತ್ತು. ಹಾಗಿದ್ದರೂ ಒಂದೇ ದಿನಕ್ಕೆ ಡಬ್ಬಿಂಗ್ ಮುಗಿಸಿದೆ ಎಂದು ಹರಿಪ್ರಿಯಾ ಖುಷಿ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಜಿಮ್ನಲ್ಲಿ ಬೆವರು ಹರಿಸುತ್ತಿರುವ ಪ್ರಿಯಾಂಕ ಉಪೇಂದ್ರ