Select Your Language

Notifications

webdunia
webdunia
webdunia
webdunia

ಇಬ್ಬರು ಮಕ್ಕಳಾದ ಮೇಲೂ ಯಶ್ ಮೇಲೆ ರಾಧಿಕಾ ಪಂಡಿತ್ ಗೆ ಬೇಸರವಿದೆಯಂತೆ!

ಇಬ್ಬರು ಮಕ್ಕಳಾದ ಮೇಲೂ ಯಶ್ ಮೇಲೆ ರಾಧಿಕಾ ಪಂಡಿತ್ ಗೆ ಬೇಸರವಿದೆಯಂತೆ!
ಬೆಂಗಳೂರು , ಗುರುವಾರ, 7 ನವೆಂಬರ್ 2019 (09:13 IST)
ಬೆಂಗಳೂರು: ಎರಡನೇ ಮಗುವಾದ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಮೊದಲ ಬಾರಿಗೆ ಮಾಧ‍್ಯಮಗಳೊಂದಿಗೆ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿ ಮಾತನಾಡಿದ್ದಾರೆ.


ಸುದ್ದಿಗೋಷ್ಠಿ ನಡೆಸಿದ ಯಶ್ ದಂಪತಿ ತಮ್ಮ ಖುಷಿಯ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಪುತ್ರ ಯಾರ ಹಾಗಿದ್ದಾನೆ ಎಂದು ಕೇಳಿದ್ದಕ್ಕೆ ಯಶ್ ನಗುತ್ತಲೇ ರಾಧಿಕಾಗೆ ತನ್ನ ಮೇಲಿರುವ ಆಕ್ಷೇಪವನ್ನು ತಮಾಷೆಯಾಗಿಯೇ ಹಂಚಿಕೊಂಡಿದ್ದಾರೆ.

ಒಂಭತ್ತು ತಿಂಗಳು ಹೊತ್ತು, ಹೆತ್ತವಳು ನಾನು. ಆದರೆ ಇಬ್ಬರೂ ಮಕ್ಕಳೂ ನನ್ನ ಥರಾ ಇಲ್ಲ. ನಿನ್ನ ಥರಾನೇ ಇದ್ದಾರೆ ಎಂದು ರಾಧಿಕಾ ಯಾವತ್ತೂ ನಂಗೆ ಹೇಳ್ತಾ ಇರ್ತಾಳೆ ಎಂದು ಯಶ್ ತಮಾಷೆಯಾಗಿ ಹೇಳಿಕೊಂಡಿದ್ದಾರೆ.

ಇನ್ನು, ಪುತ್ರಿ ಜನಿಸಿದ ಮೇಲೆ ನಿಮ್ಮ ಅದೃಷ್ಟ ಬದಲಾಯಿತು ಎಂದು ಪತ್ರಕರ್ತರು ಹೇಳಿದ್ದಕ್ಕೆ ಮಕ್ಕಳು ಎಂದರೇ ಭಾಗ್ಯ. ಅದರಲ್ಲಿ ಗಂಡು-ಹೆಣ್ಣು ಎಂಬ ಬೇಧವಿಲ್ಲ. ಇವರ ಭವಿಷ್ಯದ ಬಗ್ಗೆ ಎಲ್ಲಾ ನಾವು ಈಗಲೇ ಯೋಚಿಸಿಲ್ಲ. ಸದ್ಯಕ್ಕೆ ಈಗಿನ ಖುಷಿಯನ್ನು ಅನುಭವಿಸುತ್ತಿದ್ದೇವೆ ಎಂದು ಯಶ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಪತ್ರೆಯಿಂದ ಬಿಡುಗಡೆಯಾದ ರಾಧಿಕಾ ಪಂಡಿತ್: ಯಶ್ ಪುತ್ರನ ಫೋಟೋ ಇಲ್ಲಿದೆ ನೋಡಿ!