Publish Date: Thu, 06 Feb 2020 (09:17 IST)
Updated Date: Thu, 06 Feb 2020 (09:19 IST)
ಬೆಂಗಳೂರು: ರಮೇಶ್ ಅರವಿಂದ್ ಅಭಿನಯದ ಶಿವಾಜಿ ಸುರತ್ಕಲ್ ಎಂಬ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದ ಟ್ರೈಲರ್ ಇಂದು ಸಂಜೆ ಲಾಂಚ್ ಆಗುತ್ತಿದೆ.
ಪುಷ್ಪಕ ವಿಮಾನ ಸಿನಿಮಾ ನಂತರ ರಮೇಶ್ ಅಭಿನಯಿಸಿರುವ ವಿಭಿನ್ನ ಕಥಾ ಹಂದರದ ಸಿನಿಮಾ ಶಿವಾಜಿ ಸುರತ್ಕಲ್. ರಣಗರಿ ರಹಸ್ಯ ಎಂಬ ಟ್ಯಾಗ್ ಲೈನ್ ನಲ್ಲಿ ಮೂಡಿಬರುತ್ತಿರುವ ಸಿನಿಮಾ ಒಂದು ಕೊಲೆಯ ಸುತ್ತ ನಡೆಯುವ ಕತೆ ಹೊಂದಿದೆ.
ಈ ಸಿನಿಮಾದಲ್ಲಿ ರಮೇಶ್ ಪತ್ತೇದಾರಿಯ ಪಾತ್ರ ಮಾಡುತ್ತಿದ್ದು, ಫೈಟಿಂಗ್ ಕೂಡಾ ಮಾಡಿದ್ದಾರೆ. ಇಂದು ಸಂಜೆ 6 ಗಂಟೆಗೆ ದಿವೋ ಯೂ ಟ್ಯೂಬ್ ಚಾನೆಲ್ ನಲ್ಲಿ ಟ್ರೈಲರ ಬಿಡುಗಡೆಯಾಗುತ್ತಿದೆ.