Select Your Language

Notifications

webdunia
webdunia
webdunia
webdunia

ಈ ಬೆಡಗಿ ಜತೆ ರೊಮ್ಯಾನ್ಸ್ ಮಾಡಲಿದ್ದಾರೆ ನಿಖಿಲ್ ಕುಮಾರಸ್ವಾಮಿ

ಈ ಬೆಡಗಿ ಜತೆ ರೊಮ್ಯಾನ್ಸ್ ಮಾಡಲಿದ್ದಾರೆ ನಿಖಿಲ್ ಕುಮಾರಸ್ವಾಮಿ
ಬೆಂಗಳೂರು , ಮಂಗಳವಾರ, 4 ಫೆಬ್ರವರಿ 2020 (11:10 IST)
ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ ಪುತ್ರ, ನಟ ನಿಖಿಲ್ ಕುಮಾರಸ್ವಾಮಿ ಮದುವೆ ಸುದ್ದಿ ಬೆನ್ನಲ್ಲೇ ಮತ್ತೊಂದು ಬ್ರೇಕಿಂಗ್ ಸುದ್ದಿ ಬಂದಿದೆ.


ನಿಖಿಲ್ ವೈಯಕ್ತಿಕ ಜೀವನದಲ್ಲಿ ಮದುವೆಯ ಸಂಭ್ರಮದಲ್ಲಿದ್ದರೆ, ಅವರ ವೃತ್ತಿ ಜೀವನದಲ್ಲೂ ಹೊಸ ಸಿನಿಮಾ ಸೆಟ್ಟೇರಿದೆ ಖುಷಿಯಲ್ಲಿದ್ದಾರೆ. ಲಹರಿ ಸಂಸ್ಥೆಯ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಹೊಸ ಸಿನಿಮಾಗೆ ನಿಖಿಲ್ ನಾಯಕ. ಆ ಸಿನಿಮಾದ ಮುಹೂರ್ತ ಇತ್ತೀಚೆಗಷ್ಟೇ ನೆರವೇರಿತ್ತು.

ಈ ಸಿನಿಮಾಗೆ ಇಬ್ಬರು ನಾಯಕಿಯರಿರಲಿದ್ದು, ಈ ಪೈಕಿ ಇದೀಗ ಪುಣೆ ಮೂಲದ, ತೆಲುಗಿನಲ್ಲಿ ತೆರೆಗೆ ಪರಿಚಿತರಾದ ಕಾಶ್ಮೀರ ಪರದೇಶಿ ಎಂಬಾಕೆ ನಿಖಿಲ್ ಗೆ ನಾಯಕಿಯಾಗುತ್ತಿದ್ದಾರೆ. ತೆಲುಗಿನಲ್ಲಿ ಒಂದು ಸಿನಿಮಾದಲ್ಲಿ ಅಭಿನಯಿಸಿರುವ ಈಕೆಗೆ ಕನ್ನಡದಲ್ಲಿ ಇದೇ ಮೊದಲ ಸಿನಿಮಾವಾಗಲಿದೆ. ನಿಖಿಲ್ ಈ ಸಿನಿಮಾದಲ್ಲಿ ಬಾಸ್ಕೆಟ್ ಬಾಲ್ ಆಟಗಾರನಾಗಿ ಕಾಣಿಸಿಕೊಳ್ಳುತ್ತಿದ್ದು, ಪಕ್ಕಾ ಮನರಂಜನೆಯ ಚಿತ್ರ ಇದಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ನಲ್ಲಿ ಲಕ್ಷ ಲಕ್ಷ ಗೆದ್ದರೂ ಹಳೆಯ ವೃತ್ತಿಗೇ ಬಂದ ಶೈನ್ ಶೆಟ್ಟಿ