ವೆಹಿಕಲ್ ಮೇಲೆ ಬರೆದಿದ್ದ ಡಿ ಬಾಸ್ ಬರಹ ಅಳಿಸುತ್ತಿರುವ ಫ್ಯಾನ್ಸ್

Krishnaveni K
ಮಂಗಳವಾರ, 18 ಜೂನ್ 2024 (14:15 IST)
ಬೆಂಗಳೂರು: ರೇಣುಕಾಸ್ವಾಮಿ ಮೇಲೆ ಹಲ್ಲೆ, ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಮೇಲಿದ್ದ ಅಭಿಮಾನ ಕೆಲವು ಅಭಿಮಾನಿಗಳಿಗೆ ಕಡಿಮೆಯಾಗುತ್ತಿದೆ.

ದರ್ಶನ್ ಮತ್ತು ಗ್ಯಾಂಗ್ ನಡೆಸಿದ ಹತ್ಯೆಯ ಭೀಕರತೆ ಈಗ ಎಳೆ ಎಳೆಯಾಗಿ ಬಿಚ್ಚಿಡಲಾಗುತ್ತಿದೆ. ದರ್ಶನ್ ಮತ್ತು ಗ್ಯಾಂಗ್ ರೇಣುಕಾಸ್ವಾಮಿ ಮೇಲೆ ನಡೆಸಿದ ಚಿತ್ರಹಿಂಸೆ ಬಗ್ಗೆ ಕೇಳಿ ಹಲವರ ಹೃದಯವೇ ಚೂರಾಗಿದೆ. ತೆರೆಯ ಮೇಲೆ ಮತ್ತು ಹೊರಗೆ ಇಷ್ಟು ದಿನ ಆದರ್ಶವೆಂದುಕೊಂಡಿದ್ದ ನಟನ ಮತ್ತೊಂದು ಮುಖ ನೋಡಿ ಕೆಲವರು ಬೇಸರಪಟ್ಟುಕೊಳ್ಳುತ್ತಿದ್ದಾರೆ.

ದರ್ಶನ್ ಇತರರಿಗೆ ಮಾಡುತ್ತಿದ್ದ ಸಹಾಯ, ಅಭಿಮಾನಿಗಳಿಗೆ ಅವರು ತೋರುತ್ತಿದ್ದ ಪ್ರೀತಿ ನೋಡಿ ಎಷ್ಟೋ ಜನ ಅವರ ಹೆಸರನ್ನು ತಮ್ಮ ಮಕ್ಕಳಿಗೆ ಇಟ್ಟಿದ್ದರು. ಎಷ್ಟೋ ಮಂದಿ ತಮ್ಮ ವಾಹನಗಳ ಮೇಲೆ ದರ್ಶನ್ ಹೆಸರನ್ನು ಡಿ ಬಾಸ್ ಎಂದು ಬರೆಯಿಸಿಕೊಂಡಿದ್ದರು.

ಆದರೆ ಈಗ ಸೋಷಿಯಲ್ ಮೀಡಿಯಾದಲ್ಲಿ ಕೆಲವರು ತಮ್ಮ ಬೈಕ್ ಮೇಲೆ, ವಾಹನಗಳ ಮೇಲೆ ಬರೆಸಲಾಗಿದ್ದ ಡಿ ಬಾಸ್ ಎನ್ನುವ ಬರಹವನ್ನು ಅಳಿಸಿ ಹಾಕುತ್ತಿದ್ದಾರೆ. ಮತ್ತೆ ಕೆಲವರು ದರ್ಶನ್ ಆದರ್ಶ ಎಂದು ನಮ್ಮ ಮಗುವಿಗೆ ಹೆಸರಿಟ್ಟೆವು. ಈಗ ನೋಡಿದರೆ ಹೀಗಾಯ್ತು ಎನ್ನುತ್ತಿದ್ದಾರೆ. ಒಟ್ಟಾರೆ ಈ ಪ್ರಕರಣದಿಂದ ದರ್ಶನ್ ಜೀವಮಾನದಲ್ಲಿ ಗಳಿಸಿದ್ದ ಹೆಸರು, ಖ್ಯಾತಿ, ಗೌರವವನ್ನು ಒಂದೇ ಕ್ಷಣಕ್ಕೆ ಮಣ್ಣುಪಾಲು ಮಾಡಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ತಮಿಳು ಸೂಪರ್ ಸ್ಟಾರ್ ರಜನಿಕಾಂತ್, ನಟ ಧನುಷ್‌ಗೆ ಬಾಂಬ್ ಬೆದರಿಕೆ

ನಂದಗೋಕುಲದ ಅಭಿದಾಸ್ ಈಗ ಲ್ಯಾಂಡ್ ಲಾರ್ಡ್ ನಲ್ಲಿ ಖಡಕ್ ಚಿಕ್ಕದಣಿ

ಕಾಂತಾರ ಚಾಪ್ಟರ್ 1 ದೊಡ್ಡ ಪರದೆಯಲ್ಲಿ ಸಿನಿಮಾ ನೋಡದವರಿಗೆ ಇಲ್ಲಿದೆ ಗುಡ್‌ನ್ಯೂಸ್‌

ಏಕಾಏಕಿ ಠಾಣೆ ಮೆಟ್ಟಿಲೇರಿದ ಖ್ಯಾತ ನಟ ಚಿರಂಜೀವಿ, ಆಗಿದ್ದೇನು ಗೊತ್ತಾ

BB Season 12, ದೊಡ್ಮನೆಯಲ್ಲಿ ಈ ಜೋಡಿ ಲವ್‌ ಸ್ಟೋರಿ ಭಾರೀ ಇರಿಟೇಶನ್ ಎಂದ ನೆಟ್ಟಿಗರು

ಮುಂದಿನ ಸುದ್ದಿ
Show comments