Select Your Language

Notifications

webdunia
webdunia
webdunia
webdunia

ಪ್ರಜ್ವಲ್ ರೇವಣ್ಣ ಕೇಸ್ ಎಲ್ಲಿವರೆಗೆ ಬಂತು, ಇಲ್ಲಿದೆ ಡೀಟೈಲ್ಸ್

Prajwal Revanna

Krishnaveni K

ಬೆಂಗಳೂರು , ಮಂಗಳವಾರ, 18 ಜೂನ್ 2024 (10:38 IST)
ಬೆಂಗಳೂರು: ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತರಾಗಿರುವ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಕತೆ ಏನಾಗಿದೆ? ಅವರ ಕೇಸ್ ಎಲ್ಲಿವರೆಗೆ ಬಂದಿದೆ ಎನ್ನುವ ಡೀಟೈಲ್ಸ್ ಇಲ್ಲಿದೆ.

ನೂರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎನ್ನಲಾದ ಪೆನ್ ಡ್ರೈವ್ ಲೋಕಸಭೆ ಚುನಾವಣೆ ವೇಳೆ ಭಾರೀ ಸುದ್ದಿ ಮಾಢಿತ್ತು. ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಪ್ರಜ್ವಲ್ ರನ್ನು ಬಂದಿಸುವುದೇ ಎಸ್ ಐಟಿ ತಂಡಕ್ಕೆ ದೊಡ್ಡ ತಲೆನೋವಾಗಿತ್ತು. ಕೊನೆಗೂ ಮೇ 31 ರಂದು ಬೆಂಗಳೂರಿಗೆ ಬಂದದಿದ್ದ ಅವರನ್ನು ವಿಮಾನ ನಿಲ್ದಾಣದಲ್ಲಿಯೇ ಪೊಲೀಸರು ಬಂಧಿಸಿದ್ದರು.

ಇದಾದ ಬಳಿಕ ಪ್ರಜ್ವಲ್ ಇದೀಗ ನ್ಯಾಯಾಂಗ ಬಂಧನದಲ್ಲಿದ್ದಾರೆ .ಆದರೆ ಗಂಭೀರ ಪ್ರಕರಣವಾಗಿರುವುದರಿಂದ ಅವರಿಗೆ ಇನ್ನೂ ಜಾಮೀನು ದೊರೆತಿಲ್ಲ. ಎಸ್ ಐಟಿ ತಂಡ ಈಗ ಎರಡು ಪ್ರಕರಣಗಳ ವಿಚಾರಣೆ ಮುಗಿಸಿದೆ. ಇನ್ನುಳಿದ ಪ್ರಕರಣಗಳ ವಿಚಾರಣೆ ಕೈಗೆತ್ತಿಕೊಂಡಿದೆ.

ಆದರೆ ಅವುಗಳ ಬಗ್ಗೆ ಹೆಚ್ಚಿನ ವಿಚಾರಣೆಗೆ ಪ್ರಜ್ವಲ್ ರನ್ನು ತಮ್ಮ ವಶಕ್ಕೆ ನೀಡಬೇಕು ಎಂದು ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಲಿದ್ದಾರೆ. ಈ ಬಗ್ಗೆ ಸದ್ಯದಲ್ಲೇ ಎಸ್ ಐಟಿ ತಂಡ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಿದೆ. ನ್ಯಾಯಾಲಯ ಇದನ್ನು ಪುರಸ್ಕರಿಸುವ ಸಾಧ್ಯತೆಯೇ ಹೆಚ್ಚು. ಹೀಗಾದಲ್ಲಿ ಪ್ರಜ್ವಲ್ ಮತ್ತೆ ಪೊಲೀಸರ ವಶಕ್ಕೆ ಬರಲಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕದಲ್ಲಿ ಮುಂದಿನ ಒಂದು ವಾರ ಮಳೆ ಹೇಗಿರಲಿದೆ, ಇಲ್ಲಿದೆ ಡೀಟೈಲ್ಸ್