Select Your Language

Notifications

webdunia
webdunia
webdunia
webdunia

ಕರ್ನಾಟಕದಲ್ಲಿ ಮುಂದಿನ ಒಂದು ವಾರ ಮಳೆ ಹೇಗಿರಲಿದೆ, ಇಲ್ಲಿದೆ ಡೀಟೈಲ್ಸ್

Bengaluru

Krishnaveni K

ಬೆಂಗಳೂರು , ಮಂಗಳವಾರ, 18 ಜೂನ್ 2024 (10:13 IST)
ಬೆಂಗಳೂರು: ಕಳೆದ ವಾರ ಮಳೆಯ ಅಬ್ಬರ ತಕ್ಕಮಟ್ಟಿಗೆ ತಗ್ಗಿದ್ದರಿಂದ ಮುಂದಿನ ದಿನಗಳಲ್ಲಿ ಮತ್ತೆ ಬರಗಾಲ ಎದುರಿಸಬೇಕಾ ಎನ್ನುವ ಆತಂಕ ಜನರದ್ದಾಗಿತ್ತು. ಆದರೆ ಈಗ ಹವಾಮಾನ ಇಲಾಖೆ ಸಿಹಿ ಸುದ್ದಿ ನೀಡಿದೆ.

ಜನವರಿ 22 ರವರೆಗೆ ಕರ್ನಾಟಕದ ಹಲವೆಡೆ ಮಳೆಯಾಗಲಿದ್ದು, ಅದಾದ ಬಳಿಕವೂ ಮುಂಗಾರು ಮತ್ತಷ್ಟು ಚುರುಕಾಗಲಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ. ಕರಾವಳಿ ಜಿಲ್ಲೆಗಳಲ್ಲಾದ ದಕ್ಷಿಣ ಕನ್ನಡ, ಉಡುಪಿ, ಕಾರವಾರ ಮುಂತಾದೆಡೆ ಇಂದಿನಿಂದಲೇ ಮಳೆ ಜೋರಾಗಲಿದೆ.

ಬೆಂಗಳೂರಿನಲ್ಲಿ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದೆ. ನಿನ್ನೆ ಅಲ್ಪಮಟ್ಟಿಗೆ ಮಳೆಯಾಗಿತ್ತು. ಇಂದೂ ಮೋಡ ಕವಿದ ವಾತಾವರಣವಿದ್ದು, ಮಧ್ಯಾಹ್ನದ ನಂತರ ಮಳೆಯಾಗುವ ಸಾಧ್ಯತೆಯಿದೆ. ಕರ್ನಾಟದಕ ಕರಾವಳಿ ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ.

ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 30 ಡಿಗ್ರಿ ಕನಿಷ್ಠ ಉಷ್ಣಾಂಶ 20 ಡಿಗ್ರವರೆಗಿದೆ. ರಾಜ್ಯದಲ್ಲಿ ಒಟ್ಟಾರೆಯಾಗಿ ಗರಿಷ್ಣ ಉಷ್ಣಾಂಶ 30 ರಿಂದ 31 ಡಿಗ್ರವರೆಗಿದೆ. ಈ ಬಾರಿ ನಿರೀಕ್ಷಿತ ಸಮಯಕ್ಕೇ ಮುಂಗಾರಿನ ಆಗಮನವಾಗಿತ್ತು. ಇದರಿಂದಾಗಿ ಈ ಬಾರಿ ಹೆಚ್ಚು ಮಳೆಯಾಗುವ ನಿರೀಕ್ಷೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Darshan Thoogudeepa: ದರ್ಶನ್ ಗೆ ಇಂದು ಮೈಸೂರ್ ಸುತ್ತು ಹೊಡೆಸಲಿರುವ ಪೊಲೀಸರು