ಎರಡು ನಿಮಿಷ ವಿಚಾರಣೆ ಮಾಡಿದ್ದಕ್ಕೆ ಫುಲ್ ಗಾಬರಿ ಬಿದ್ದ ನಟ ಚಿಕ್ಕಣ್ಣ

Krishnaveni K
ಮಂಗಳವಾರ, 18 ಜೂನ್ 2024 (12:37 IST)
Photo Credit: Facebook
ಬೆಂಗಳೂರು: ರೇಣಿಕಾಸ್ವಾಮಿ ಹತ್ಯೆ ಕೇಸ್ ನಲ್ಲಿ ಬಂಧಿತರಾಗಿರುವ ನಟ ದರ್ಶನ್ ಜೊತೆ ಪಾರ್ಟಿ ಮಾಡಿದ್ದರೆಂಬ ಕಾರಣಕ್ಕೆ ಪೊಲೀಸರು ನಿನ್ನೆ ನಟ ಚಿಕ್ಕಣ್ಣ ಅವರನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ನಡೆಸಿತ್ತು.

ಚಿಕ್ಕಣ್ಣರ ಮನೆಗೆ ತೆರಳಿದ್ದ ಪೊಲೀಸರು ಮೊದಲು ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿದ್ದರು. ಬಳಿಕ ತಾವೇ ಚಿಕ್ಕಣ್ಣನನ್ನು ಕರೆದುಕೊಂಡು ಸ್ಟೋನಿ ಬ್ರೂಕ್ ರೆಸ್ಟೋರೆಂಟ್ ನಲ್ಲಿ ಸ್ಥಳ ಮಹಜರಿಗೂ ತೆರಳಿದ್ದರು. ಹತ್ಯೆಗೆ ಮೊದಲು ದರ್ಶನ್ ಇಲ್ಲಿಯೇ ಚಿಕ್ಕಣ್ಣ ಸೇರಿದಂತೆ ತಮ್ಮ ಸಂಗಡಿಗರ ಜೊತೆ ಪಾರ್ಟಿ ಮಾಡಿದ್ದರು ಎನ್ನಲಾಗಿದೆ.

ಈ ಕಾರಣಕ್ಕೆ ಚಿಕ್ಕಣ್ಣರನ್ನು ವಿಚಾರಣೆ ನಡೆಸಲಾಗಿತ್ತು. ಕೆಲವು ಹೊತ್ತು  ವಿಚಾರಣೆ ನಡೆಸಿದ ಬಳಿಕ ಪೊಲೀಸರು ಚಿಕ್ಕಣ್ಣರನ್ನು ಬಿಟ್ಟು ಕಳುಹಿಸಿದ್ದರು. ಇದಕ್ಕೆ ಮೊದಲು ದರ್ಶನ್ ಪಾರ್ಟಿಯಲ್ಲಿ ಯಾವ ರೀತಿ ಇದ್ದರು, ಯಾರ ಜೊತೆಗೆ ಮಾತನಾಡುತ್ತಿದ್ದರು, ಅವರಿಗೆ ಕರೆ ಬರುತ್ತಿತ್ತಾ ಎಂದೆಲ್ಲಾ ಪೊಲೀಸರು ಪ್ರಶ್ನೆ ಕೇಳಿದ್ದರು ಎನ್ನಲಾಗಿದೆ.

ಪೊಲೀಸರ ಕೆಲವೇ ಕ್ಷಣಗಳ ವಿಚಾರಣೆ ಬಳಿಕ ಚಿಕ್ಕಣ್ಣ ಗಾಬರಿ ಬಿದ್ದು ಹೋಗಿದ್ದಾರೆ ಎಂದು ಅವರ ಮುಖ ನೋಡಿದರೇ ಸ್ಪಷ್ಟವಾಗುತ್ತಿತ್ತು. ಮಾಧ್ಯಮಗಳು ಪ್ರಶ್ನಿಸಿದಾಗಲೂ ತೀರಾ ಸಣ್ಣ ಧ್ವನಿಯಲ್ಲಿ ಚುಟುಕಾಗಿ ಒಂದು ಹೇಳಿಕೆ ಕೊಟ್ಟರಷ್ಟೇ ಹೊರತು ಹೆಚ್ಚು ಏನೂ ಮಾತನಾಡಲಿಲ್ಲ. ಇದನ್ನು ನೋಡಿದರೆ ಈ ಪ್ರಕರಣದ ಗಂಭೀರತೆ ಎಷ್ಟಿದೆ ಎನ್ನುವುದು ಗೊತ್ತಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ತಮಿಳು ಸೂಪರ್ ಸ್ಟಾರ್ ರಜನಿಕಾಂತ್, ನಟ ಧನುಷ್‌ಗೆ ಬಾಂಬ್ ಬೆದರಿಕೆ

ನಂದಗೋಕುಲದ ಅಭಿದಾಸ್ ಈಗ ಲ್ಯಾಂಡ್ ಲಾರ್ಡ್ ನಲ್ಲಿ ಖಡಕ್ ಚಿಕ್ಕದಣಿ

ಕಾಂತಾರ ಚಾಪ್ಟರ್ 1 ದೊಡ್ಡ ಪರದೆಯಲ್ಲಿ ಸಿನಿಮಾ ನೋಡದವರಿಗೆ ಇಲ್ಲಿದೆ ಗುಡ್‌ನ್ಯೂಸ್‌

ಏಕಾಏಕಿ ಠಾಣೆ ಮೆಟ್ಟಿಲೇರಿದ ಖ್ಯಾತ ನಟ ಚಿರಂಜೀವಿ, ಆಗಿದ್ದೇನು ಗೊತ್ತಾ

BB Season 12, ದೊಡ್ಮನೆಯಲ್ಲಿ ಈ ಜೋಡಿ ಲವ್‌ ಸ್ಟೋರಿ ಭಾರೀ ಇರಿಟೇಶನ್ ಎಂದ ನೆಟ್ಟಿಗರು

ಮುಂದಿನ ಸುದ್ದಿ
Show comments