Select Your Language

Notifications

webdunia
webdunia
webdunia
webdunia

ಹೋಟೆಲ್ ನಲ್ಲಿ ಬಾಂಬ್ ಇರುವುದಾಗಿ ಸುಳ್ಳು ಕರೆ; ಚೆನ್ನೈ ಮೂಲದ ನಟನ ಬಂಧನ

ಚೆನ್ನೈ
ಚೆನ್ನೈ , ಶುಕ್ರವಾರ, 28 ಆಗಸ್ಟ್ 2020 (13:48 IST)
ಚೆನ್ನೈ : ಹೋಟೆಲ್ ವೊಂದಕ್ಕೆ ಬಾಂಬ್ ಇಟ್ಟಿದ್ದಾರೆ ಎಂದು ಸುಳ್ಳು ಕರೆ ಮಾಡಿದ ನಟನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಚೆನ್ನೈ ಮೂಲದ ಕೆನಡಿ ಜಾನ್ ಗಂಗಾಧರ್ ವೆಬ್ ಸರಣಿ ಹಾಗೂ ಕಿರು ಚಿತ್ರಗಳಲ್ಲಿ ನಟಿಸುತ್ತಿದ್ದ. ತೇನಾಂಪೇಟೆಯಲ್ಲಿನ ಐಶರಾಮಿ ಹೋಟೆಲ್ ಮ್ಯಾನೇಜರ್ ರೊಬ್ಬರು ವೆಬ್ ಸರಣಿಯನ್ನು ನಿರ್ಮಾಣ ಮಾಡುತ್ತಿದ್ದು ಇದರಲ್ಲಿ ಗಂಗಾಧರ್ ನಟಿಸುತ್ತಿದ್ದಾರಂತೆ. ಆದರೆ ಶೂಟಿಂಗ್ ಗೆಂದು ಬಂದ ಗಂಗಾಧರ್ ಶೂಟಿಂಗ್ ರದ್ದಾಗಿರುವುದು ತಿಳಿಯದೆ ಶೂಟಿಂಗ್ ಸ್ಥಳದಲ್ಲಿ ಕಾದಿದ್ದಾರೆ. ಆದರೆ ಕೊನೆಗೆ ಶೂಟಿಂಗ್ ರದ್ದಾಗಿರುವುದು ತಿಳಿದು ಕೋಪಗೊಂಡ ನಟ ನಿರ್ಮಾಪಕರ ಹೋಟೆಲ್ ನಲ್ಲಿ ಬಾಂಬ್ ಇರುವುದಾಗು ಸುಳ್ಳು ಕರೆ ಮಾಡಿದ್ದಾನೆ.

ಆಗ ಪೊಲೀಸರು ಶ್ವಾನಗಳೊಂದಿಗೆ ಬಂದು 1 ಗಂಟೆಗಳ ಕಾಲ ಬಾಂಬ್ ಗಾಗಿ ಹುಡುಕಾಡಿದ್ದಾರೆ. ಬಳಿಕ ಹುಸಿ ಕರೆ ಎಂದು ತಿಳಿದು ತನಿಖೆ ನಡೆಸಿ ನಟನನ್ನು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಿಚ್ಚ ಸುದೀಪ್ ಸಿನಿಮಾದಲ್ಲಿ ಹಾಟ್ ನಟಿ ಸನ್ನಿ ಲಿಯೋನ್