Publish Date: Wed, 26 Aug 2020 (10:23 IST)
Updated Date: Wed, 26 Aug 2020 (10:25 IST)
ಚೆನ್ನೈ : ಆಗಾಗ ಮದುವೆಯ ವದಂತಿಯ ಮೂಲಕವೇ ಸುದ್ಧಿಯಾಗುತ್ತಿದ್ದ ನಟಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಇದೀಗ ತಮ್ಮ ಮದುವೆ ಯಾವಾಗ ಎಂಬುದನ್ನು ತಿಳಿಸಿದ್ದಾರೆ.
ನಟಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಲವ್ ವಿಚಾರ ಎಲ್ಲರಿಗೂ ತಿಳಿದೆ ಇದೆ. ಆದರೆ ಈ ಜೋಡಿ ಗುಟ್ಟಾಗಿ ಮದುವೆಯಾಗಿದ್ದಾರೆ. ಸಂಸಾರ ಮಾಡುತ್ತಿದ್ದಾರೆ ಎಂಬ ಸುದ್ಧಿ ಆಗಾಗ ಕೇಳಿಬರುತ್ತಿತ್ತು, ಬಳಿಕ ಅದು ವದಂತಿ ಅಷ್ಟೇ ಎನ್ನಲಾಗುತ್ತಿತ್ತು.
ಆದರೆ ಇದೀಗ ಸಂದರ್ಶನವೊಂದರಲ್ಲಿ ನಯನತಾರಾ ಜೊತೆಗಿನ ಮದುವೆಯ ಬಗ್ಗೆ ಮಾತನಾಡಿದ ನಿರ್ದೇಶಕ ವಿಘ್ನೇಶ್ ಶಿವನ್, ನಮ್ಮಿಬ್ಬರ ವಿವಾಹದ ಬಗ್ಗೆ ಸಾಕಷ್ಟು ವದಂತಿಗಳು ಹರಿದಾಡುತ್ತಿದೆ. ಆದರೆ ನಮ್ಮ ಗುರಿಗಳನ್ನು ನಾವು ಮೊದಲು ರೀಚ್ ಆಗಬೇಕು. ಮದುವೆ ಬಗ್ಗೆ ಚಿಂತೆ ಮಾಡಿಲ್ಲ. ಸದ್ಯಕ್ಕೆ ನಾವಿಬ್ಬರು ಹಾಯಾಗಿ ಸಂತೋಷವಾಗದ್ದೇವೆ. ಡೇಟಿಂಗ್ ಬೋರ್ ಎನಿಸಿದಾಗ ಮದುವೆಯಾಗುತ್ತೇವೆ ಎಂದು ಹೇಳಿದ್ದಾರೆ.