Publish Date: Wed, 26 Aug 2020 (09:38 IST)
Updated Date: Wed, 26 Aug 2020 (09:41 IST)
ಚೆನ್ನೈ: ಕೊರೋನಾದಿಂದಾಗಿ ಚೆನ್ನೈನ ಎಂಜಿಎಂ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಕ ಎಸ್ ಪಿ ಬಾಲಸುಬ್ರಮಣ್ಯಂ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದೆ ಎಂದು ಪುತ್ರ ಎಸ್ ಪಿ ಚರಣ್ ತಿಳಿಸಿದ್ದಾರೆ.
ಈಗಲೂ ಎಸ್ ಪಿಬಿಗೆ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಅವರ ಆರೋಗ್ಯದಲ್ಲಿ ಸುಧಾರಣೆಯಿದೆ. ಶೇ. 90 ರಷ್ಟು ಎಚ್ಚರವಾಗಿದ್ದಾರೆ. ಅವರ ಆರೋಗ್ಯ ಸುಧಾರಣೆಗೆ ಎಂಜಿಎಂ ಆಸ್ಪತ್ರೆಯ ವೈದ್ಯರ ತಂಡ ಹಗಲು ಇರುಳೆನ್ನದೇ ಶ್ರಮಿಸುತ್ತಿದೆ. ಅಭಿಮಾನಿಗಳು ಅವರ ಆರೋಗ್ಯಕ್ಕಾಗಿ ಮಾಡಿದ ಪ್ರಾರ್ಥನೆ ಫಲ ಕೊಡುತ್ತಿದೆ ಎಂದು ಎಸ್ ಪಿ ಚರಣ್ ತಿಳಿಸಿದ್ದಾರೆ.