Select Your Language

Notifications

webdunia
webdunia
webdunia
Saturday, 12 April 2025
webdunia

ಕನ್ನಡ ವಿಚಾರಕ್ಕೆ ಯಶ್ ಬಳಿಕ ಪತ್ನಿ ರಾಧಿಕಾ ಪಂಡಿತ್ ಗೂ ನೆಟ್ಟಿಗರ ತರಾಟೆ

ರಾಕಿಂಗ್ ಸ್ಟಾರ್ ಯಶ್
ಬೆಂಗಳೂರು , ಮಂಗಳವಾರ, 25 ಆಗಸ್ಟ್ 2020 (11:07 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಗಣೇಶೋತ್ಸವಕ್ಕೆ ಶುಭ ಕೋರುವಾಗ ಇಂಗ್ಲಿಷ್ ನಲ್ಲಿ ಬರೆದುಕೊಂಡಿದ್ದು ನೆಟ್ಟಿಗರಲ್ಲಿ ಆಕ್ರೋಶ ಮೂಡಿಸಿತ್ತು. ಇದೀಗ ಪತ್ನಿ ರಾಧಿಕಾ ಪಂಡಿತ್ ಕೂಡಾ ಅದೇ ವಿಚಾರಕ್ಕೆ ಟ್ರೋಲ್ ಆಗಿದ್ದಾರೆ.


ಬೇರೆ ಭಾಷೆಯವರಿಗೆ ನಿಮ್ಮ ಮೆಸೇಜ್ ಅರ್ಥವಾಗಲಿ ಎಂದು ಇಂಗ್ಲಿಷ್ ನಲ್ಲಿ ಬರೆಯುವುದು ಯಾಕೆ? ಅರ್ಥವಾಗಬೇಕಾದರೆ ಅವರೇ ಕನ್ನಡ ಕಲಿತುಕೊಳ್ಳಲಿ ಎಂದು ಟ್ರೋಲಿಗರು ಯಶ್ ರನ್ನು ತರಾಟೆಗೆ ತೆಗೆದುಕೊಂಡಿದ್ದರು.

ಇದೀಗ ರಾಧಿಕಾ ಪಂಡಿತ್ ತಮ್ಮ ಮಗನ ಹೆಸರನ್ನು ಸದ್ಯದಲ್ಲೇ ಬಹಿರಂಗಗೊಳಿಸುವುದಾಗಿ ಇಂಗ್ಲಿಷ್ ನಲ್ಲಿ ಬರೆದುಕೊಂಡಿರುವುದಕ್ಕೆ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ನೀವೆಲ್ಲಾ ಕನ್ನಡ ನಟರಾಗಿ ಯಾಕೆ ಕನ್ನಡ ಬಳಸದೇ ಇಂಗ್ಲಿಷ್ ಬಳಸುತ್ತೀರಿ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೆಗಾಸ್ಟಾರ್ ಚಿರಂಜೀವಿಗೆ ಅವಮಾನ ಮಾಡಿದ್ದಾರಂತೆ ಈ ಸ್ಟಾರ್ ನಟ