ಹೈದರಾಬಾದ್ : ಮೆಗಾಸ್ಟಾರ್ ಚಿರಂಜೀವಿ ಅವರು ಖ್ಯಾತ ನಟರೆನಿಸಿಕೊಂಡು ಟಾಲಿವುಡ್ ಸಿನಿಮಾರಂಗದಲ್ಲಿ ತಮ್ಮದೇ ಚಾಪು ಮೂಡಿಸಿದವರು. ಇಂತಹ ಮಹಾನ್ ನಟನಿಗೆ ಸ್ಟಾರ್ ನಟರೊಬ್ಬರು ಅವಮಾನ ಮಾಡಿದ್ದಾರೆ ಎಂದು ಅವರ ಸಹೋದರ ನಾಗಬಾಬು ಅವರು ಹೇಳಿದ್ದಾರೆ.
ಹೌದು. ಇತ್ತೀಚೆಗಷ್ಟೇ ಈ ವಿಚಾರವನ್ನು ಅವರು ಬಹಿರಂಗಪಡಿಸಿದ್ದಾರೆ. ಚಿರಂಜೀವಿ ಅವರ ಗೆಳೆಯ ಪುರಾಣಂ ಸೂರಿ ಸಿನಿಮಾ ನಿರ್ಮಾಣ ಮತ್ತು ವಿತರಣೆ ಕೆಲಸ ಮಾಡುತ್ತಿದ್ದರಂತೆ. ಆದಕಾರಣ ಒಬ್ಬ ಸ್ಟಾರ್ ನಟನ ಸಿನಿಮಾ ಪ್ರಿವ್ಯೂಗೆ ಪುರಾಣಂ ಸೂರಿ ಕಡೆಯಿಂದ ಚಿರಂಜೀವಿ ಅವರು ತಮ್ಮ ಗೆಳೆಯರ ಜೊತೆ ಹೋಗಿದ್ದಾರಂತೆ . ಅಲ್ಲಿ ಮೊದಲನೇ ಸಾಲಿನಲ್ಲಿ ಕುಳಿತ್ತಿದ್ದಾರಂತೆ. ಆಗ ಅಲ್ಲಿಗೆ ಬಂದ ಸ್ಟಾರ್ ನಟ ಚಿರಂಜೀವಿ ಅವರು ಕುಳಿತ ಸೀಟು ಬೇಕೆಂದು ಅವರನ್ನು ಎಬ್ಬಿಸಿದ್ದಾರಂತೆ. ಇದು ಚಿರಂಜೀವಿಯವರಿಗೆ ತುಂಬಾ ಬೇಸರ ತಂದಿದೆಯಂತೆ.