Publish Date: Mon, 05 Jul 2021 (13:09 IST)
Updated Date: Mon, 05 Jul 2021 (11:28 IST)
ಕೊಚ್ಚಿ: ದೃಶ‍್ಯಂ ಸಿನಿಮಾ ಮೂಲಕ ಎಲ್ಲಾ ಭಾಷೆಯ ಸಿನಿ ಪ್ರಿಯರಿಗೆ ಮೋಡಿ ಮಾಡಿದ್ದ ಸೂಪರ್ ಸ್ಟಾರ್ ಮೋಹನ್ ಲಾಲ್-ನಿರ್ದೇಶಕ ಜಿತು ಜೋಸೆಫ್ ಜೋಡಿ ಈಗ ಮತ್ತೊಂದು ಸಿನಿಮಾ ಮಾಡಲು ಹೊರಟಿದ್ದಾರೆ.
ದೃಶ್ಯಂ ಸಕ್ಸಸ್ ಜೋಡಿಯಿಂದ ಮತ್ತೊಂದು ಸಿನಿಮಾ ಅನೌನ್ಸ್ ಆಗಿದ್ದು, ಇದಕ್ಕೆ 12th ಮ್ಯಾನ್ ಎಂದು ಟೈಟಲ್ ಇಡಲಾಗಿದೆ. ಚಿತ್ರದ ಪೋಸ್ಟರ್ ಕೂಡಾ ಬಿಡುಗಡೆಯಾಗಿದೆ.
ಪೋಸ್ಟರ್ ಮತ್ತು ಸಿನಿಮಾ ಟೈಟಲ್ ನೋಡಿದರೆ ಇದೂ ಕೂಡಾ ಒಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವಿರಬಹುದು ಎನಿಸುತ್ತದೆ. ದೃಶ್ಯಂ ಭಾಗ 1 ಮತ್ತು ಭಾಗ 2, ಎರಡೂ ಕೂಡಾ ಸೂಪರ್ ಹಿಟ್ ಆಗಿದ್ದವು. ಇತರ ಭಾಷೆಗಳಿಗೂ ಇದು ರಿಮೇಕ್ ಆಗಿದ್ದವು. ಇದೀಗ ಇದೇ ಯಶಸ್ವೀ ಜೋಡಿ ಇನ್ನೊಂದು ಸಿನಿಮಾ ಮಾಡಲು ಹೊರಟಿರುವುದು ಪ್ರೇಕ್ಷಕರಿಗೆ ನಿಜಕ್ಕೂ ಖುಷಿ ತಂದಿದೆ.