ಕೊಚ್ಚಿ: ಕೇರಳದಲ್ಲಿ ಜನರನ್ನು ಮತ್ತೆ ಥಿಯೇಟರ್ ನತ್ತ ಸೆಳೆಯಲು ಅಲ್ಲಿನ ಚಿತ್ರರಂಗ ಹೊಸ ಪ್ಲ್ಯಾನ್ ಮಾಡಿದೆ. ಇದಕ್ಕಾಗಿ ಏಕಕಾಲಕ್ಕೆ ಎಲ್ಲಾ ಥಿಯೇಟರ್ ಗಳಲ್ಲಿ ಒಂದೇ ಸಿನಿಮಾ ಬಿಡುಗಡೆಯಾಗಲಿದೆ.
ಸೂಪರ್ ಸ್ಟಾರ್ ಮೋಹನ್ ಲಾಲ್ ಅಭಿನಯದ ಮರಕ್ಕರ್- ಅರಬ್ಬಿಕಡಲಿಂದೆ ಸಿಂಹಂ ಸಿನಿಮಾ ಮೂರು ವಾರಗಳ ಕಾಲ ಕೇರಳದಾದ್ಯಂತ ಥಿಯೇಟರ್ ಗಳಲ್ಲಿ ಪ್ರದರ್ಶನಗೊಳ್ಳಲಿದೆ. ಈ ವೇಳೆ ಬೇರೆ ಯಾವುದೇ ಚಿತ್ರ ಬಿಡುಗಡೆ ಮಾಡದೇ ಇರಲು ಅಲ್ಲಿನ ಸಿನಿಮಾ ಪ್ರದರ್ಶಕರ ಒಕ್ಕೂಟ ತೀರ್ಮಾನಿಸಿದೆ.
ವರ್ಷದ ನಂತರ ಥಿಯೇಟರ್ ತೆರೆದಿದ್ದು, ಸ್ಟಾರ್ ಸಿನಿಮಾ ಬಿಡುಗಡೆ ಮಾಡಿದರೆ ಜನರು ಮತ್ತೆ ಚಿತ್ರಮಂದಿರದತ್ತ ಬರುತ್ತಾರೆ ಎನ್ನುವುದು ಅವರ ಲೆಕ್ಕಾಚಾರ. ಇದಕ್ಕಾಗಿ 100 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾದ ಈ ಸ್ಟಾರ್ ಸಿನಿಮಾವನ್ನು ಪ್ರದರ್ಶಿಸಿ ಜನರನ್ನು ಸೆಳೆಯಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಇಡೀ ಚಿತ್ರರಂಗವೇ ಒಗ್ಗಟ್ಟಾಗಿದೆ.