Select Your Language

Notifications

webdunia
webdunia
webdunia
webdunia

ಕೊರಿಯನ್ ಯುವತಿಯ ಹಾಡು ಕೊನೆಗೂ ಪವರ್ ಸ್ಟಾರ್ ಪುನೀತ್ ಕಿವಿ ಮುಟ್ಟಿತು!

ಕೊರಿಯನ್ ಯುವತಿಯ ಹಾಡು ಕೊನೆಗೂ ಪವರ್ ಸ್ಟಾರ್ ಪುನೀತ್ ಕಿವಿ ಮುಟ್ಟಿತು!
ಬೆಂಗಳೂರು , ಮಂಗಳವಾರ, 29 ಜೂನ್ 2021 (16:12 IST)
ಬೆಂಗಳೂರು: ಕೊರಿಯನ್ ಮೂಲದ ಯುವತಿಯೊಬ್ಬಳು ಯುವರತ್ನ ಸಿನಿಮಾದ ‘ನೀನಾದೆ ನಾ’ ಹಾಡಿಗೆ ಧ್ವನಿಯಾಗಿದ್ದ ವಿಡಿಯೋವೊಂದು ಮೊನ್ನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.


ಕನ್ನಡದ ಹಾಡಿಗೆ ಕೊರಿಯನ್ ಯುವತಿ ಸ್ಪಷ್ಟವಾದ ಉಚ್ಛಾರಣೆಯೊಂದಿಗೆ, ರಾಗವಾಗಿ ಹಾಡುವುದನ್ನು ನೋಡಿ ಎಲ್ಲರೂ ನಿಬ್ಬೆರಗಾಗಿದ್ದರು. ಈ ಹುಡುಗಿಯ ಹಾಡು ಈಗ ಸ್ವತಃ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಗೆ ತಲುಪಿದೆ.

ಹಾಡಿನ ವಿಡಿಯೋ ಲಿಂಕ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿರುವ ಪುನೀತ್, ‘ಸಂಗೀತಕ್ಕೆ ದೇಶ, ಭಾಷೆ ಅಡ್ಡಿ ಬರೋಲ್ಲ ಅನ್ನೋದಕ್ಕೆ ಈ ವಿಡಿಯೋ ಸಾಕ್ಷಿ. ಧನ್ಯವಾದಗಳು’ ಎಂದು ಹೊಗಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಂಜನೇಯನ ತೋರಿಸಲಾಗದ ಬೇಸರದಲ್ಲಿ ನಟ ಅರ್ಜುನ್ ಸರ್ಜಾ