Publish Date: Mon, 28 Jun 2021 (12:10 IST)
Updated Date: Mon, 28 Jun 2021 (10:00 IST)
ಬೆಂಗಳೂರು: ಲಾಕ್ ಡೌನ್ ಕಾಲದಲ್ಲಿ ಸ್ಟಾರ್ ನಟರು ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದರ ಬಗ್ಗೆ ಹಲವು ಸುದ್ದಿಗಳನ್ನು ಓದಿರುತ್ತೀರಿ. ತಮ್ಮ ಅಭಿಮಾನಿಗಳ ಬಳಗದ ಮೂಲಕ ನಟರು ಕಷ್ಟದಲ್ಲಿರುವವರಿಗೆ ನೆರವಾಗಿದ್ದರು.
ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಈಗ ಈ ರೀತಿ ಲಾಕ್ ಡೌನ್ ನಲ್ಲಿ ಕಷ್ಟದಲ್ಲಿರುವವರಿಗೆ ವಿವಿಧ ರೀತಿಯ ನೆರವು ನೀಡಿದ ತಮ್ಮ ಹಾಗೂ ಕುಟುಂಬಸ್ಥರ ಅಭಿಮಾನಿ ಬಳಗದವರಿಗೆ ವಿಶೇಷವಾಗಿ ಧನ್ಯವಾದ ಸಲ್ಲಿಸಿದ್ದಾರೆ.
ಸಂಕಷ್ಟ ಕಾಲದಲ್ಲಿ ಆಹಾರ ಕಿಟ್, ಮೆಡಿಕಲ್ ಕಿಟ್, ಊಟ ವಿತರಿಸಿದ ಅಭಿಮಾನಿ ಬಳಗದ ವಿಶೇಷ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಪುನೀತ್, ಎಲ್ಲಾ ಅಭಿಮಾನಿ ಬಳಗಕ್ಕೂ ನಮ್ಮ ಹೃದಯ ಪೂರ್ವಕ ಧನ್ಯವಾದಗಳು ಎಂದಿದ್ದಾರೆ.