Publish Date: Sun, 27 Jun 2021 (17:03 IST)
Updated Date: Sun, 27 Jun 2021 (10:43 IST)
ಬೆಂಗಳೂರು: ಇಂದು ನಾಡಪ್ರಭು ಕೆಂಪೇಗೌಡರ ಜಯಂತಿ. ಈ ದಿನಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಶುಭ ಕೋರಿದ್ದಾರೆ.
ಬೆಂದಕಾಳೂರು ಕಟ್ಟಿ ಕನ್ನಡಿಗರಿಗಾಗಿ ಆಸರೆಯಾಗಿ ನಿಂತ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಇಂದು ಆಚರಿಸಲಾಗುತ್ತಿದೆ. ಅವರ ಧರ್ಮಕಾರ್ಯಗಳು, ಆದರ್ಶಗಳು ಎಂದೆಂದಿಗೂ ಜೀವಂತ ಎಂದು ದರ್ಶನ್ ಶುಭ ಕೋರಿದ್ದಾರೆ.
ಇನ್ನು, ಸಿಎಂ ಯಡಿಯೂರಪ್ಪ ಸೇರಿದಂತೆ ರಾಜಕೀಯ ನಾಯಕರು, ಸೆಲೆಬ್ರಿಟಿಗಳು, ಜನ ಸಾಮಾನ್ಯರೂ ಸಾಮಾಜಿಕ ಜಾಲತಾಣದ ಮೂಲಕ ನಾಡಪ್ರಭುವನ್ನು ಸ್ಮರಿಸಿಕೊಂಡಿದ್ದಾರೆ.