Publish Date: Sat, 26 Jun 2021 (11:13 IST)
Updated Date: Sat, 26 Jun 2021 (09:33 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂದರೆ ಅಭಿಮಾನಿಗಳ ಕ್ರೇಜ್ ಗೆ ಏನೂ ಕಮ್ಮಿಯಿಲ್ಲ. ಆದರೆ ಇಲ್ಲೊಂದು ಅಭಿಮಾನಿಗಳ ಬಳಗ ಡಿ ಬಾಸ್ ಮೇಲಿನ ಪ್ರೀತಿಯನ್ನು ವಿಶಿಷ್ಟವಾಗಿ ತೋರಿಸಿದ್ದಾರೆ.
ಉತ್ತರ ಕರ್ನಾಟಕದ ರೈತರ ಹಬ್ಬ ಕಾರ ಹುಣ್ಣಿಮೆ. ಇದರ ಪ್ರಯುಕ್ತ ರೈತರು ತಮ್ಮ ಎತ್ತುಗಳನ್ನು ಶೃಂಗರಿಸುತ್ತಾರೆ. ಆದರೆ ಶಮನೆವಾಡಿ ಗ್ರಾಮದ ಪ್ರದೀಪ್ ಮತ್ತು ಸ್ನೇಹಿತರು ಡಿ ಬಾಸ್ ಚಿತ್ರವನ್ನು ಎತ್ತಿನ ಮೇಲೆ ಬರೆದು ತಮ್ಮ ಮೆಚ್ಚಿನ ನಟನ ಮೇಲಿನ ಪ್ರೀತಿಯನ್ನು ಪ್ರಕಟಿಸಿದ್ದಾರೆ.
ಕಲಾವಿದ ನಾಗರಾಜ ಮಾಲಗತ್ತಿ ಈ ಚಿತ್ರವನ್ನು ಬರೆದಿದ್ದಾರೆ. ಎತ್ತಿನ ಮೈ ಮೇಲೆ ದರ್ಶನ್ ರ ಚಿತ್ರ ಬಿಡಿಸಿ ಬಳಿಕ ಡಿ ಬಾಸ್ ಎಂದು ಬರೆಯಲಾಗಿದೆ.