Select Your Language

Notifications

webdunia
webdunia
webdunia
webdunia

ವಿಚ್ಛೇದನದ ಬಳಿಕ ಒಟ್ಟಿಗೆ ಕಾಣಿಸಿಕೊಂಡ ಅಮೀರ್ ಖಾನ್-ಕಿರಣ್ ರಾವ್

ವಿಚ್ಛೇದನದ ಬಳಿಕ ಒಟ್ಟಿಗೆ ಕಾಣಿಸಿಕೊಂಡ ಅಮೀರ್ ಖಾನ್-ಕಿರಣ್ ರಾವ್
ಮುಂಬೈ , ಸೋಮವಾರ, 5 ಜುಲೈ 2021 (12:50 IST)
ಮುಂಬೈ: ಮೊನ್ನೆಯಷ್ಟೇ 15 ವರ್ಷದ ದಾಂಪತ್ಯಕ್ಕೆ ವಿಚ್ಛೇದನ ನೀಡುತ್ತಿರುವುದಾಗಿ ಘೋಷಿಸಿದ್ದ ಬಾಲಿವುಡ್ ನಟ ಅಮೀರ್ ಖಾನ್-ಕಿರಣ್ ರಾವ್ ‍ದಂಪತಿ ಇದೀಗ ಒಟ್ಟಿಗೆ ನೆಟ್ಟಿಗರ ಮುಂದೆ ಬಂದಿದ್ದಾರೆ.


ವಿಚ್ಛೇದನದ ಬಗ್ಗೆ ಸ್ಪಷ್ಟನೆ ನೀಡಲು ಇಬ್ಬರೂ ಲೈವ್ ಬಂದಿದ್ದಾರೆ. ವಿಚ್ಛೇದನವಾಗುತ್ತಿದ್ದರೂ ನಾವಿಬ್ಬರೂ ಸ್ನೇಹಿತಾಗಿ ಮುಂದುವರಿಯಲಿದ್ದೇವೆ ಎಂದು ಅಮೀರ್ ಖಾನ್ ಹೇಳಿದ್ದರು. ಅದರಂತೇ ಈಗ ಲೈವ್ ವಿಡಿಯೋದಲ್ಲೂ ಕೈ ಕೈ ಹಿಡಿದುಕೊಂಡೇ ನಗು ನಗುತ್ತಲೇ ತಾವು ಬೇರೆಯಾಗುತ್ತಿರುವ ವಿಚಾರ ಹೇಳಿದ್ದಾರೆ.

‘ನಮ್ಮ ನಿರ್ಧಾರ ಕೆಲವರಿಗೆ ಶಾಕ್, ಕೆಲವರಿಗೆ ಬೇಸರ ತಂದಿರಬಹುದು. ಆದರೆ ನಾವಿಬ್ಬರೂ ಆರಾಮವಾಗಿದ್ದೇವೆ. ನಾವು ಈಗಲೂ ಒಂದೇ ಕುಟುಂಬ. ಆದರೆ ನಮ್ಮ ಸಂಬಂಧ ಮಾತ್ರ ತುಸು ಬದಲಾಗಿದೆಯಷ್ಟೇ. ನಮ್ಮ ಫೌಂಡೇಷನ್ ಕೆಲಸ ನಮ್ಮ ಮಗ ಆಝಾದ್ ನಷ್ಟೇ ಆಪ್ತ. ಅದು ಮೊದಲಿನಂತೆಯೇ ಮುಂದುವರಿಯಲಿದೆ’ ಎಂದು ಅಮೀರ್-ಕಿರಣ್ ರಾವ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಸ್ಟಾರ್ ಗಳಿಗೆ ನಿರಾಸೆ ತಂದ ಅನ್ ಲಾಕ್ 3.0