ಮುಂಬೈ: ಬಹುಭಾಷಾ ತಾರೆ ನಯನತಾರಾ ಬಾಲಿವುಡ್ ಬಾದ್ ಶಹಾಗೆ ಜೋಡಿಯಾಗಲಿದ್ದಾರಂತೆ. ಈ ಮೂಲಕ ಮೊದಲ ಬಾರಿಗೆ ಹಿಂದಿ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ.
ಮರ್ಸಲ್ ಖ್ಯಾತಿಯ ನಿರ್ದೇಶಕ ಅಟ್ಲಿಕುಮಾರ್ ನಿರ್ದೇಶನದ ಸಿನಿಮಾದಲ್ಲಿ ನಯನತಾರಾ ಶಾರುಖ್ ಖಾನ್ ಗೆ ಜೋಡಿಯಾಗಲಿದ್ದಾರೆ ಎಂಬ ಸುದ್ದಿ ಬಂದಿದೆ.
ವಿಶೇಷವೆಂದರೆ ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಖಳನಾಯಕನ ಪಾತ್ರ ಮಾಡುತ್ತಿದ್ದಾರೆ ಎಂಬ ಸುದ್ದಿಯಿದೆ. ಆದರೆ ಅದಿನ್ನೂ ಅಧಿಕೃತವಾಗಿಲ್ಲ.