Publish Date: Sun, 13 Jun 2021 (09:49 IST)
Updated Date: Sun, 13 Jun 2021 (09:51 IST)
ಮುಂಬೈ: ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿರುವ ಕರೀನಾ ಕಪೂರ್ ರಾಮಾಯಣದ ಸೀತೆಯ ಪಾತ್ರ ಮಾಡಬಾರದು! ಹೀಗಂತ ಟ್ವಿಟರಿಗರು ಕರೀನಾ ವಿರುದ್ಧ ತಿರುಗಿಬಿದ್ದಿದ್ದಾರೆ.
ಬಾಲಿವುಡ್ ನಲ್ಲಿ ರಾಮಾಯಣ ಆಧರಿಸಿ ಬಿಗ್ ಬಜೆಟ್ ಸಿನಿಮಾವೊಂದು ನಿರ್ಮಾಣವಾಗಲಿದೆ. ಈ ಸಿನಿಮಾದಲ್ಲಿ ಕರೀನಾ ಸೀತೆಯ ಪಾತ್ರ ಮಾಡಲಿದ್ದಾರೆ ಎಂಬ ಗಾಳಿ ಸುದ್ದಿ ಹಬ್ಬಿದ್ದೇ ತಡ, ಟ್ವಿಟರಿಗರು ಬಾಯ್ಕಾಟ್ ಕರೀನಾ ಎಂಬ ಅಭಿಯಾನವನ್ನೇ ಶುರು ಮಾಡಿದ್ದಾರೆ.
ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿರುವ ಕರೀನಾ ಹಿಂದೂಗಳ ಆರಾಧ್ಯ ದೈವ ಪ್ರಭು ಶ್ರೀರಾಮಚಂದ್ರನ ಪತ್ನಿ, ಸೀತಾಮಾತೆಯ ಪಾತ್ರ ಮಾಡಬಾರದು. ಇದು ಹಿಂದೂ ಧರ್ಮಕ್ಕೆ ಮಾಡುವ ಅವಮಾನ. ಹಿಂದುತ್ವದ ಮೇಲೆ ನಂಬಿಕೆಯೇ ಇಲ್ಲದವರ ಸೀತೆಯ ಪಾತ್ರ ಮಾಡಬಾರದು ಎಂದು ಟ್ವಿಟರಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.