Select Your Language

Notifications

webdunia
webdunia
webdunia
Thursday, 10 April 2025
webdunia

ನಟಿ ಹರ್ಷಿಕಾ ಬಾಳಿಗೆ ಹೊಸ ಅರ್ಥ ಕೊಟ್ಟವರಾರು?!

ಹರ್ಷಿಕಾ ಪೂಣಚ್ಚ
ಬೆಂಗಳೂರು , ಭಾನುವಾರ, 13 ಜೂನ್ 2021 (09:32 IST)
ಬೆಂಗಳೂರು: ಕೊರೋನಾ, ಲಾಕ್ ಡೌನ್ ಸಮಯದಲ್ಲಿ ನಟಿ ಹರ್ಷಿಕಾ ಪೂಣಚ್ಚ ಹಾಗೂ ನಟ ಭುವನ್ ಪೊನ್ನಣ್ಣ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.


ರಾಜ್ಯದ ಮೂಲೆ ಮೂಲೆಗೂ ತೆರಳಿ ಭುವನಂ ಫೌಂಡೇಷನ್ ವತಿಯಿಂದ ಹರ್ಷಿಕಾ-ಭುವನ್ ಆಹಾರ ಕಿಟ್ ಗಳನ್ನು ಒದಗಿಸಿ ಜನರಲ್ಲಿ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಇದೀಗ ಅವರ ಕೆಲಸಕ್ಕೆ ತಕ್ಕ ಮನ್ನಣೆಯೇ ಸಿಕ್ಕಿದೆ.

ಇವರ ಒಳ್ಳೆಯ ಕೆಲಸ ನೋಡಿದ ದಂಪತಿಯೊಬ್ಬರು ತಮಗೆ ಹುಟ್ಟಿದ ಹೆಣ್ಣು ಮಗುವಿಗೆ ‘ಹರ್ಷಿಕಾ’ ಎಂದು ಹೆಸರಿಟ್ಟಿದ್ದಾರಂತೆ. ಅಷ್ಟೇ ಅಲ್ಲ, ನಿಮ್ಮಂತೇ ಈಕೆಯೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಆಶೀರ್ವಾದ ಮಾಡಿ ಮೇಡಂ ಎಂದು ಕೇಳಿಕೊಂಡಿದ್ದಾರಂತೆ. ಈ ದಂಪತಿ ಹರ್ಷಿಕಾಗೆ ಸಂದೇಶ ಕಳುಹಿಸಿದ್ದಾರೆ. ಆ ಸಂದೇಶದ ಸ್ಕ್ರೀನ್ ಶಾಟ್ ತೆಗೆದು ಪ್ರಕಟಿಸಿರುವ ಹರ್ಷಿಕಾ ‘ನನ್ನ ಜೀವನಕ್ಕೆ ಹೊಸ ಅರ್ಥ ಸಿಕ್ಕಿರುವ ಹಾಗಿದೆ. ಈ ಮುದ್ದು ಪುಟಾಣಿ ಕಂದಮ್ಮನಿಗೆ ನನ್ನ ಹೆಸರಿಟ್ಟಿದ್ದಾರೆ. ನಿಮ್ಮ ಪ್ರೀತಿಗೆ ನನ್ನ ಮನಸ್ಸು ತುಂಬಿದೆ. ಈ ವಿಶ್ವಾಸಕ್ಕೆ ಎಂದೆಂದೂ ಚಿರಋಣಿ’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಕ್ಕ ಐರಾಳನ್ನೇ ಫಾಲೋ ಮಾಡ್ತಿದ್ದಾನೆ ಜ್ಯೂನಿಯರ್ ರಾಕಿ ಬಾಯ್