Select Your Language

Notifications

webdunia
webdunia
webdunia
webdunia

ಮದುವೆ ಖರ್ಚು ವಾಪಸ್ ಕೊಡಲು ನಯನತಾರಾ-ವಿಘ್ನೇಶ್ ಗೆ ಬೇಡಿಕೆಯಿಟ್ಟಿತಾ ನೆಟ್ ಫ್ಲಿಕ್ಸ್?!

ಮದುವೆ ಖರ್ಚು ವಾಪಸ್ ಕೊಡಲು ನಯನತಾರಾ-ವಿಘ್ನೇಶ್ ಗೆ ಬೇಡಿಕೆಯಿಟ್ಟಿತಾ ನೆಟ್ ಫ್ಲಿಕ್ಸ್?!
ಚೆನ್ನೈ , ಬುಧವಾರ, 20 ಜುಲೈ 2022 (16:55 IST)
ಚೆನ್ನೈ: ಇತ್ತೀಚೆಗೆ ವಿವಾಹವಾಗಿರುವ ಟಾಲಿವುಡ್ ಜೋಡಿ ನಯನತಾರಾ-ವಿಘ‍್ನೇಶ‍್ ಶಿವನ್ ಮದುವೆಗೆ ಎಕ್ಸ್ ಕ್ಲೂಸಿವ್ ರೈಟ್ ಪಡೆದಿದ್ದ ನೆಟ್ ಫ್ಲಿಕ್ಸ್ ಸಂಸ್ಥೆ ಇದೀಗ ನವಜೋಡಿಗೆ ಮದುವೆಗೆ ಹಾಕಿದ್ದ ಖರ್ಚು ವಾಪಸ್ ಮಾಡಲು ಕೇಳಿದೆಯಾ? ಇಂತಹದ್ದೊಂದು ಸುದ್ದಿ ಹರಿದಾಡುತ್ತಿದೆ.

ನೆಟ್ ಫ್ಲಿಕ್ಸ್ ಸಂಸ್ಥೆ ನಯನತಾರಾ-ವಿಘ‍್ನೇಶ್ ಮದುವೆಯ ಫೋಟೋ,ವಿಡಿಯೋ ಪ್ರಸಾರ ಮಾಡಲು 25 ಕೋಟಿ ರೂ.ಗೆ ಒಪ್ಪಂದ ಮಾಡಿಕೊಂಡಿತ್ತು. ಜೊತೆಗೆ ಮದುವೆ ದಿನದ ಊಟದ ಖರ್ಚನ್ನೂ ನೋಡಿಕೊಂಡಿತ್ತಂತೆ.  ಆದರೆ ಮದುವೆಯ ಫೋಟೋ ವಿಡಿಯೋಗಳನ್ನು ನಮ್ಮ ಹೊರತು ಹಂಚಿಕೊಳ್ಳಬಾರದು ಎಂಬ ಷರತ್ತನ್ನು ವಿಘ‍್ನೇಶ್ ಶಿವನ್ ಮುರಿದಿದ್ದರು.

ಮದುವೆಯಾದ ತಕ್ಷಣವೇ ಅವರು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಲೇ ಇದ್ದರು. ಇದರಿಂದ ಅಸಮಾಧಾನಗೊಂಡಿರುವ ನೆಟ್ ಫ್ಲಿಕ್ಸ್ ಡೀಲ್ ರದ್ದು ಮಾಡಲು ಆಗ್ರಹಿಸಿದೆ ಎಂಬ ಸುದ್ದಿ ಹರಿದಾಡುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆ ಬಗ್ಗೆ ಮೌನ ಮುರಿದ ನಿತ್ಯಾ ಮೆನನ್