Select Your Language

Notifications

webdunia
webdunia
webdunia
webdunia

ರಜನೀಕಾಂತ್ ಹಾದಿಯಲ್ಲಿ ಮೆಗಾಸ್ಟಾರ್ ಚಿರಂಜೀವಿ

ರಜನೀಕಾಂತ್ ಹಾದಿಯಲ್ಲಿ ಮೆಗಾಸ್ಟಾರ್ ಚಿರಂಜೀವಿ
ಹೈದರಾಬಾದ್ , ಸೋಮವಾರ, 18 ಜುಲೈ 2022 (08:55 IST)
ಹೈದರಾಬಾದ್: ಸೂಪರ್ ಸ್ಟಾರ್ ರಜನೀಕಾಂತ್ ಸಿನಿಮಾಗಳೆಂದರೆ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಯಶಸ್ಸು ಕಾಣುತ್ತವೆ. ಅವರ ಸಿನಿಮಾಗಳು ಸೋತಿದ್ದು ಕಡಿಮೆ.

ಹೀಗಾಗಿ ನಿರ್ಮಾಪಕರೂ ಕೋಟಿ ಕೋಟಿ ಬಜೆಟ್ ಹಾಕಿ ಸಿನಿಮಾ ಮಾಡುತ್ತಾರೆ. ಒಂದು ವೇಳೆ ಸೋತರೂ ಅವರು ನಿರ್ಮಾಪಕರನ್ನು ಕೈ ಬಿಡಲ್ಲ. ನಿರ್ಮಾಪಕರಿಗೆ ಎಷ್ಟೋ ಬಾರಿ ರಜನಿ ನಷ್ಟ ಭರ್ತಿ ಮಾಡಿಕೊಟ್ಟಿದ್ದಾರೆ.

ಇದೀಗ ಮೆಗಾಸ್ಟಾರ್ ಚಿರಂಜೀವಿ ಕೂಡಾ ಅದೇ ಹಾದಿಯಲ್ಲಿದ್ದಾರೆ. ಆಚಾರ್ಯ ಸಿನಿಮಾ ಸೋಲು ವಿತರಕರಿಗೆ ಭಾರೀ ನಷ್ಟವಾಗಿತ್ತು. ಈ ಹಿನ್ನಲೆಯಲ್ಲಿ ವಿತರಕರು ನಷ್ಟ ಭರ್ತಿ ಮಾಡಿಕೊಡಲು ಚಿರಂಜೀವಿ ಮತ್ತು ರಾಮ್ ಚರಣ್ ಗೆ ಬೇಡಿಕೆಯಿಟ್ಟಿದ್ದರು. ಅವರ ಬೇಡಿಕೆಯನ್ನು ಈಡೇರಿಸಿರುವ ಚಿರಂಜೀವಿ ವಿತರಕರಿಗೆ 20 ಕೋಟಿ ರೂ. ನಷ್ಟ ಭರ್ತಿ ಮಾಡಿಕೊಟ್ಟಿದ್ದಾರೆ ಎನ್ನಲಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪುನೀತ್ ರಾಜ್ ಕುಮಾರ್ ಜೇಮ್ಸ್ ಟಿವಿಯಲ್ಲಿ ವೀಕ್ಷಿಸಿ