Publish Date: Sat, 16 Jul 2022 (09:20 IST)
Updated Date: Sat, 16 Jul 2022 (09:40 IST)
ಮಂಗಳೂರು: ದಿಯಾ ಸಿನಿಮಾ ಖ್ಯಾತಿಯ ನಟ ಪೃಥ್ವಿ ಅಂಬರ್ ತಾಯಿ ಸುಜಾತ ನಿಧನರಾಗಿದ್ದಾರೆ.
ಮಂಗಳೂರಿನವರಾದ ಪೃಥ್ವಿ ಅಂಬರ್ ತಾಯಿ ಸುಜಾತ ಸಮಾಜ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದರು. ಹೃದಯ ಸಂಬಂಧೀ ರೋಗದಿಂಬ ಬಳಲುತ್ತಿದ್ದ ಅವರು ನಿನ್ನೆ ಮೃತಪಟ್ಟಿದ್ದಾರೆ.
ಪೃಥ್ವಿ ಅಂಬರ್ ಇತ್ತೀಚೆಗೆ ಬಿಡುಗಡೆಯಾದ ಶುಗರ್ ಲೆಸ್ ಸಿನಿಮಾದ ನಾಯಕರಾಗಿದ್ದು, ಶಿವರಾಜ್ ಕುಮಾರ್ ಅಭಿನಯದ ಭೈರಾಗಿ ಸಿನಿಮಾದಲ್ಲೂ ಪಾತ್ರ ಮಾಡಿದ್ದರು. ಸಿನಿಮಾ ಜೀವನದಲ್ಲಿ ಯಶಸ್ಸು ಸಿಗುತ್ತಿರುವ ಹೊತ್ತಲ್ಲೇ ಅಮ್ಮನನ್ನು ಕಳೆದುಕೊಂಡ ದುಃಖ ಪೃಥ್ವಿಯದ್ದಾಗಿದೆ.