Select Your Language

Notifications

webdunia
webdunia
webdunia
webdunia

ವಿಶೇಷ ದಿನ ಪುನೀತ್ ಕನಸಿನ ಕೂಸು ಗಂಧದ ಗುಡಿ ರಿಲೀಸ್

ವಿಶೇಷ ದಿನ ಪುನೀತ್ ಕನಸಿನ ಕೂಸು ಗಂಧದ ಗುಡಿ ರಿಲೀಸ್
ಬೆಂಗಳೂರು , ಶನಿವಾರ, 16 ಜುಲೈ 2022 (08:10 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕನಸಿನ ಕೂಸು ಗಂಧದ ಗುಡಿ ಡಾಕ್ಯುಮೆಂಟರಿ ಚಿತ್ರ ಬಿಡುಗಡೆಗೆ ದಿನಾಂಕ ನಿಗದದಿಯಾಗಿದೆ.

ಅಕ್ಟೋಬರ್ 28 ರಂದು ಚಿತ್ರ ಥಿಯೇಟರ್ ನಲ್ಲಿ ಬಿಡುಗಡೆಯಾಗಲಿದೆ. ಈ ಡಾಕ್ಯುಮೆಂಟರಿ ಕರ್ನಾಟಕದ ಅರಣ್ಯ ಸಂಪತ್ತಿನ ವೈಭವವನ್ನು ನಮ್ಮ ಮುಂದಿಡಲಿದೆ.  ವಿಶೇಷವೆಂದರೆ ಈ ಸಾಕ್ಷ್ಯಚಿತ್ರದಲ್ಲಿ ಸ್ವತಃ ಪುನೀತ್ ರಾಜ್ ಕುಮಾರ್ ಅಭಿನಯಿಸಿದ್ದು ಅವರೇ ಧ್ವನಿ ಕೂಡಾ ನೀಡಿದ್ದಾರೆ. ಜೇಮ್ಸ್ ಅವರ ಕೊನೆಯ ಕಮರ್ಷಿಯಲ್ ಸಿನಿಮಾವಾಗಿದ್ದರೂ ಆ ಸಿನಿಮಾದಲ್ಲಿ ಪುನೀತ್ ಧ್ವನಿ ಇರಲಿಲ್ಲ ಎಂಬ ಬೇಸರ ಅಭಿಮಾನಿಗಳಿಗಿತ್ತು. ಆದರೆ ಇಲ್ಲಿ ಹಾಗಲ್ಲ ಎನ್ನುವುದು ವಿಶೇಷ.

ಇನ್ನು, ಈ ಸಾಕ್ಷ್ಯಚಿತ್ರ ವಿಶೇಷ ದಿನದಂದೇ ಬಿಡುಗಡೆಯಾಗಲಿದೆ. ಅಕ್ಟೋಬರ್ 29 ರಂದು ಪುನೀತ್ ನಮ್ಮನ್ನು ಅಗಲಿ ಒಂದು ವರ್ಷವಾಗಲಿದೆ. ಈ ಪುಣ್ಯ ದಿನದ ಸಂದರ್ಭದಲ್ಲೇ ಸಾಕ್ಷ್ಯಚಿತ್ರ ಬಿಡುಗಡೆಯಾಗುತ್ತಿರುವುದು ವಿಶೇಷ.

Share this Story:

Follow Webdunia kannada

ಮುಂದಿನ ಸುದ್ದಿ

ತಮಿಳು ನಟ ಪ್ರತಾಪ್ ಅನುಮಾನಾಸ್ಪದ ಸಾವು