Publish Date: Fri, 15 Jul 2022 (16:56 IST)
Updated Date: Fri, 15 Jul 2022 (16:57 IST)
ಚೆನ್ನೈ: ತಮಿಳು ನಟ ಪ್ರತಾಪ್ ಪೋಥೆನ್ ಚೆನ್ನೈನ ಪ್ಲ್ಯಾಟ್ ನಲ್ಲಿ ಶವವಾಗಿ ಪತ್ತೆಯಾಗಿದ್ದು, ಅವರ ಸಾವಿನ ಬಗ್ಗೆ ಅನುಮಾನ ಮೂಡಿದೆ.
69 ವರ್ಷದ ಪ್ರತಾಪ್ ಮೃತದೇಹ ಫ್ಲ್ಯಾಟ್ ನಲ್ಲಿ ಪತ್ತೆಯಾಗಿದ್ದು, ಅನಾರೋಗ್ಯದ ಕಾರಣದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗುತ್ತಿದೆ. ಫ್ಲ್ಯಾಟ್ ನಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರಿಂದ ಅವರ ಸಾವಿನ ನಿಜ ಕಾರಣ ಗೊತ್ತಾಗಿಲ್ಲ.
ಕೇರಳ ಮೂಲದವರಾದ ಪ್ರತಾಪ್ ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದರು. ರಾಷ್ಟ್ರಪ್ರಶಸ್ತಿ, ಫಿಲಂ ಫೇರ್ ಅವಾರ್ಡ್ ಗಳನ್ನೂ ಪಡೆದುಕೊಂಡಿದ್ದರು. ಎರಡು ಮದುವೆಯಾಗಿದ್ದ ಪ್ರತಾಪ್ ಎರಡು ಬಾರಿಯೂ ವಿಚ್ಛೇದನ ಪಡೆದುಕೊಂಡಿದ್ದರು. ಅವರಿಗೆ ಒಬ್ಬ ಹೆಣ್ಣುಮಗಳಿದ್ದಾಳೆ. ಇದೀಗ ಅವರ ಸಾವಿಗೆ ಚಿತ್ರರಂಗ ಕಂಬನಿ ಮಿಡಿದಿದೆ.