Publish Date: Fri, 15 Jul 2022 (15:57 IST)
Updated Date: Fri, 15 Jul 2022 (15:59 IST)
ಬೆಂಗಳೂರು: ಟ್ವಿಟರ್ ನಲ್ಲಿ ಸಕ್ರಿಯರಲ್ಲದ ಕಾರಣ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಟ್ವಿಟರ್ ಖಾತೆಯಲ್ಲಿರುವ ಬ್ಲೂ ಟಿಕ್ ಮಾರ್ಕ್ ಅನ್ನು ಕಿತ್ತು ಹಾಕಿದ ಟ್ವಿಟರ್ ಸಂಸ್ಥೆ ವಿರುದ್ಧ ಅಭಿಮಾನಿಗಳ ಆಕ್ರೋಶ ಹೆಚ್ಚಾಗಿದೆ.
ದೃಢೀಕರಿಸಿದ ಖಾತೆಗಳಿಗೆ ನೀಡಲಾಗುವ ಬ್ಲೂ ಟಿಕ್ ಮಾರ್ಕ್ ತೆಗೆದು ಹಾಕಿದ್ದಕ್ಕೆ ನಿನ್ನೆಯಿಂದ ಪುನೀತ್ ಅಭಿಮಾನಿಗಳು ಟ್ವಿಟರ್ ಸಂಸ್ಥೆಗೆ ಮರಳಿ ಬ್ಲೂ ಟಿಕ್ ಮಾರ್ಕ್ ನೀಡುವಂತೆ ಆಗ್ರಹಿಸುತ್ತಲೇ ಇದ್ದಾರೆ. ಆದರೆ ಇದುವರೆಗೆ ಟ್ವಿಟರ್ ಸಂಸ್ಥೆ ಇದಕ್ಕೆ ಸ್ಪಂದಿಸಿಲ್ಲ.
ಇದೀಗ ನಿರ್ದೇಶಕ ಸಂತೋಷ್ ಆನಂದ್ ರಾಮ್ ಸೇರಿದಂತೆ ಅಭಿಮಾನಿಗಳು ದೈಹಿಕವಾಗಿ ನಮ್ಮನ್ನು ಅಗಲಿದರೂ ಮನೆ ಮನಗಳಲ್ಲಿ ನೆಲೆಸಿರುವ ಪ್ರೀತಿಯ ಅಪ್ಪು ಖಾತೆಗೆ ಬ್ಲೂ ಟಿಕ್ ಮರಳಿಸಿ ಗೌರವ ಸಲ್ಲಿಸಬೇಕೆಂದು ಅಭಿಯಾನವನ್ನೇ ಆರಂಭಿಸಿದ್ದಾರೆ.