Select Your Language

Notifications

webdunia
webdunia
webdunia
webdunia

ಆಸ್ಪತ್ರೆಗೆ ದಾಖಲಾದ ನಿರ್ದೇಶಕ ಮಣಿರತ್ನಂ

ಆಸ್ಪತ್ರೆಗೆ ದಾಖಲಾದ ನಿರ್ದೇಶಕ ಮಣಿರತ್ನಂ
ಚೆನ್ನೈ , ಮಂಗಳವಾರ, 19 ಜುಲೈ 2022 (09:10 IST)
ಚೆನ್ನೈ: ಖ್ಯಾತ ನಿರ್ದೇಶಕ ಮಣಿರತ್ನಂ ಕೊರೋನಾ ಸೋಂಕಿಗೊಳಗಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ಜುಲೈ 8 ರಂದು ನಡೆದಿದ್ದ ಪೊನ್ನಿಯನ್ ಸೆಲ್ವನ್ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಣಿರತ್ನಂ ಭಾಗಿಯಾಗಿದ್ದರು. ಇದೀಗ ಕೊರೋನಾ ಸೋಂಕಿಗೊಳಗಾಗಿದ್ದು ಚಿಕಿತ್ಸೆಗಾಗಿ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಆರೋಗ್ಯದ ಬಗ್ಗೆ ಹೆಚ್ಚಿನ ಮಾಹಿತಿ ಬಂದಿಲ್ಲ.

ನಿನ್ನೆಯಷ್ಟೇ ಮಣಿರತ್ನಂ ಮತ್ತು ನಟ ವಿಕ್ರಂಗೆ ಪೊನ್ನಿಯನ್ ಸೆಲ್ವನ್ ಚಿತ್ರದಲ್ಲಿ ಚೋಳರ ಬಗ್ಗೆ ವಿವಾದಾತ್ಮಕ ಅಂಶವಿದೆ ಎಂಬ ಕಾರಣಕ್ಕೆ ಕೋರ್ಟ್ ನೋಟಿಸ್ ಬಂದಿತ್ತು. ಇದರ ಬೆನ್ನಲ್ಲೇ ಮಣಿರತ್ನಂಗೆ ಕೊರೋನಾ ರೂಪದಲ್ಲಿ ಶಾಕ್ ಬಂದೆರಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಿಚ್ಚ ಸುದೀಪ್-ರವಿಚಂದ್ರನ್ ಜೋಡಿಯ ತೆರೆ ಮೇಲೆ ನೋಡಲು ರೆಡಿಯಾಗಿ!