Select Your Language

Notifications

webdunia
webdunia
webdunia
webdunia

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಟ್ವಿಟರ್ ಖಾತೆಗೆ ಮರಳಿ ಬಂತು ಬ್ಲೂ ಟಿಕ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಟ್ವಿಟರ್ ಖಾತೆಗೆ ಮರಳಿ ಬಂತು ಬ್ಲೂ ಟಿಕ್
ಬೆಂಗಳೂರು , ಸೋಮವಾರ, 18 ಜುಲೈ 2022 (16:11 IST)
ಬೆಂಗಳೂರು: ಕೊನೆಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಧಿಕೃತ ಟ್ವಿಟರ್ ಖಾತೆಗೆ ಬ್ಲೂ ಟಿಕ್ ಮರಳಿ ಬಂದಿದೆ. ಅಭಿಮಾನಿಗಳ ಒತ್ತಾಯಕ್ಕೆ ಟ್ವಿಟರ್ ಮಣಿದಿದೆ.

ಅಧಿಕೃತವಾಗಿ ಬಳಸದೇ ಇರುವ ಟ್ವಿಟರ್ ಖಾತೆಯಿಂದ ಟ್ವಿಟರ್ ಸಂಸ್ಥೆ ಬ್ಲೂ ಟಿಕ್ ಮಾರ್ಕ್ ತೆಗೆದುಹಾಕುತ್ತದೆ. ಹಾಗಿದ್ದರೂ ಕೆಲವು ಸೆಲೆಬ್ರಿಟಿಗಳು, ದಿಗ್ಗಜರ ಗೌರವಾರ್ಥ ಬ್ಲೂ ಟಿಕ್ ಉಳಿಸಲಾಗುತ್ತದೆ.

ಈಗ ಪುನೀತ್ ಖಾತೆಯನ್ನೂ ಅವರ ಗೌರವಾರ್ಥ ಬ್ಲೂ ಟಿಕ್ ಮಾರ್ಕ್ ಉಳಿಸಿಕೊಳ್ಳಬೇಕು ಎಂಬುದು ಅಭಿಮಾನಿಗಳ ಬೇಡಿಕೆಯಾಗಿತ್ತು. ಅದಕ್ಕೆ ಸ್ಪಂದಿಸಿರುವ ಟ್ವಿಟರ್ ಈಗ ಬ್ಲೂ ಟಿಕ್ ಮರಳಿಸಿದೆ. ಇದಕ್ಕೆ ಅಭಿಮಾನಿಗಳು ಟ್ವಿಟರ್ ಗೆ ಧನ್ಯವಾದ ಸಲ್ಲಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಕ್ರಾಂತ್ ರೋಣಗೆ ಶುಭ ಹಾರೈಸಿದ ಲೇಡಿ ಸಚಿನ್ ಮಿಥಾಲಿ ರಾಜ್