Publish Date: Mon, 18 Jul 2022 (09:25 IST)
Updated Date: Mon, 18 Jul 2022 (09:49 IST)
ಬೆಂಗಳೂರು: ಕಿರುತೆರೆಯಿಂದ ಹಿರಿತೆರೆಗೆ ಬಡ್ತಿ ಪಡೆದು ಖ್ಯಾತರಾದ ಎಷ್ಟೋ ನಟಿಯರಿದ್ದಾರೆ. ಆ ಸಾಲಿಗೆ ಈಗ ನಟಿ ಅಂಕಿತಾ ಅಮರ್ ಸೇರಿಕೊಳ್ಳುತ್ತಿದ್ದಾರೆ.
ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಮ್ಮನೆ ಯುವರಾಣಿ ಧಾರವಾಹಿಯಲ್ಲಿ ಮೀರಾ ಪಾತ್ರ ಮಾಡುತ್ತಿದ್ದ ಪ್ರತಿಭಾವಂತ ನಟಿ ಅಂಕಿತಾ ಅಮರ್ ಈಗ ಸಿನ್ಮಾ ಹೀರೋಯಿನ್ ಆಗ್ತಿದ್ದಾರೆ.
ರಕ್ಷಿತ್ ಶೆಟ್ಟಿ ತಮ್ಮ ನಿರ್ಮಾಣ ಸಂಸ್ಥೆ ಪರಂವಾ ಸ್ಟುಡಿಯೋದಿಂದ ನಿರ್ಮಿಸುತ್ತಿರುವ ಹೊಸ ಸಿನಿಮಾಗೆ ಅಂಕಿತಾ ನಾಯಕಿಯಾಗಿ ಆಯ್ಕೆಯಾಗಿದ್ದು, ನಾಯಕನಾಗಿ ಪಂಚತಂತ್ರ ಸಿನಿಮಾ ಖ್ಯಾತಿಯ ಯುವ ನಟ ವಿಹಾನ್ ನಾಯಕರಾಗಿ ಆಯ್ಕೆಯಾಗಿದ್ದಾರೆ. ಕಿರುತೆರೆಯಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಅಂಕಿತಾ ಈಗ ಬೆಳ್ಳಿ ತೆರೆಯಲ್ಲಿ ಮೋಡಿ ಮಾಡಲಿದ್ದಾರೆ.