Select Your Language

Notifications

webdunia
webdunia
webdunia
webdunia

ವಿಜಯ್ ಸೇತುಪತಿ ಬಂದ ಮೇಲೆ ಫಹಾದ್ ಫಾಸಿಲ್ ಮುನಿಸ್: ಸ್ಪಷ್ಟನೆ ಕೊಟ್ಟ ಪುಷ್ಪ 2 ಟೀಂ

webdunia
ಹೈದರಾಬಾದ್ , ಶನಿವಾರ, 9 ಜುಲೈ 2022 (08:10 IST)
ಹೈದರಾಬಾದ್: ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪ 2 ರಲ್ಲಿ ಫಹಾದ್ ಫಾಸಿಲ್ ಜೊತೆಗೆ ವಿಜಯ್ ಸೇತುಪತಿ ಕೂಡಾ ಪ್ರಮುಖ ವಿಲನ್ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿ ಕೇಳಿಬಂದಿತ್ತು.

ಮೊದಲ ಭಾಗದಲ್ಲಿ ಫಹಾದ್ ಕೊನೆಯಾರ್ಧದಲ್ಲಿ ಬಂದರೂ ಎಸ್ ಪಿ ಬನ್ವರ್ ಸಿಂಗ್ ಶೆಖಾವತ್ ಆಗಿ ಖಡಕ್ ಪಾತ್ರ ಮಾಡಿದ್ದರು. ಅವರ ಈ ಪಾತ್ರವೇ ಪುಷ್ಪ 2 ರಲ್ಲೂ ಪ್ರಮುಖವಾಗಿರಲಿದೆ ಎನ್ನಲಾಗುತ್ತಿದ್ದರೂ ಇವರ ಜೊತೆಗೆ ವಿಜಯ್ ಸೇತುಪತಿಯನ್ನೂ ಕರೆತರಲಾಗಿದೆ.

ಇದು ಫಹಾದ್ ಅಸಮಾಧಾನಕ್ಕೆ ಗುರಿಯಾಗಿದ್ದು, ಈ ಕಾರಣಕ್ಕೆ ಅವರು ಪುಷ್ಪ 2 ರಿಂದ ಹೊರನಡೆದಿದ್ದಾರೆ ಎಂಬ ಸುದ್ದಿಯಿತ್ತು. ಇದಕ್ಕೆ ಚಿತ್ರತಂಡ ಸ್ಪಷ್ಟನೆ ನೀಡಿದ್ದು, ಫಹಾದ್ ಹಾಗೂ ವಿಜಯ್ ಇಬ್ಬರೂ ಪುಷ್ಪ 2 ರ ಭಾಗವಾಗಿರಲಿದ್ದಾರೆ. ಫಹಾದ್ ಚಿತ್ರದಿಂದ ಹೊರನಡೆದಿಲ್ಲ ಎಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೈಗರ್ ಶ್ರಾಫ್ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ ರಶ್ಮಿಕಾ ಮಂದಣ್ಣ