Publish Date: Thu, 25 Jan 2018 (15:51 IST)
Updated Date: Thu, 25 Jan 2018 (15:54 IST)
ಇತ್ತೀಚಿಗಷ್ಟೇ ದೇಸಿ ಲೆಹೆಂಗಾದಲ್ಲಿ ಆಭರಣಗಳನ್ನು ತೊಟ್ಟು ಪಕ್ಕಾ ದೇಸಿ ರಾಜಕುಮಾರಿಯ ಹಾಗೆ ಅಭಿಮಾನಿಗಳ ಕಣ್ಣು ಕುಕ್ಕಿದ್ದ ದೀಪಿಕಾ ಇದೀಗ ರಫ್ ಎಂಡ್ ಟಫ್ ಕಾಪ್ ಲುಕ್ ಅಲ್ಲಿ ತಾನು ಎಲ್ಲಾ ಪಾತ್ರಗಳಿಗೂ ಫಿಟ್ ಆಗಿ ಕಾಣಿಸಬಲ್ಲೆ ಎಂಬುದನ್ನು ನಿಜ ಮಾಡಿದ್ದಾರೆ.
ಇತ್ತೀಚಿಗೆ ತುಂಬಾ ವಿವಾದ ತಂದುಕೊಂಡಿದ್ದ "ಪದ್ಮಾವತ್" ಚಿತ್ರದಲ್ಲಿ ದೇಸಿ ಲುಕ್ ಅಲ್ಲಿ ಕಾಣಿಸಿಕೊಂಡಿದ್ದ ದೀಪಿಕಾ ಈಗ ಹೊಸದಾಗಿ ಪೋಲಿಸ್ ಗೆಟಪ್‌ನಲ್ಲಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸಕತ್ ಕಿಕ್ ಕೊಟ್ಟಿದ್ದಾರೆ
ಹೌದು, ಮುಂಬೈಯಲ್ಲಿ ದೀಪಿಕಾ ಒಂದು ಜಾಹೀರಾತು ಶೂಟ್‌ನಲ್ಲಿ ಪೋಲೀಸ್ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳು ಜಾಲತಾಣದಲ್ಲಿ ಸಕತ್ ವೈರಲ್ ಆಗಿದ್ದು ಹೆಚ್ಚಾಗಿ ಚಿತ್ರದ ಪ್ರಮೋಷನ್‌ಗಳಲ್ಲಿ ವಿವಿಧ ರೀತಿಯ ಡ್ರೆಸ್‌ಗಳು ಮತ್ತು ಒಡವೆಗಳನ್ನು ಧರಿಸಿ ಫೋಟೋಗೆ ಪೋಸ್ ನೀಡುತ್ತಿದ್ದ ದೀಪಿಕಾ ಪೋಲಿಸ್ ಗೆಟಪ್‌ನಲ್ಲಿ ಕೊಂಚ್ ಡಿಫರೆಂಟ್ ಆಗಿ ಕಾಣಿಸಿರುವುದು ಅಭಿಮಾನಿಗಳಿಗೆ ಸಕತ್ ಇಷ್ಟವಾಗಿದೆಯಂತೆ.
ಈ ಫೋಟೋ ಶೂಟ್‌ನಲ್ಲಿ ದೀಪಿಕಾ ತಮ್ಮ ಕೂದಲನ್ನು ಬನ್ ಮಾಡಿ, ಬಿಳಿ ಬಣ್ಣದ ಶರ್ಟ್ ಮತ್ತು ಬಿಗಿಯಾದ ಖಾಕಿ ಪ್ಯಾಂಟ್ ಅನ್ನು ಧರಿಸಿದ್ದಾರೆ. ಜೀಪ್‌ನ ಬೊನೆಟ್ ಮೇಲೆ ಗತ್ತಿನಲ್ಲಿ ಕೂತಿರುವ ಈ ಚಿತ್ರವನ್ನು ದೀಪಿಕಾ ಅವರ ಫ್ಯಾನ್ ಕ್ಲಬ್ ಹಂಚಿಕೊಂಡಿದ್ದು ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ಸದ್ದು ಮಾಡುತ್ತಿದೆ. ಯಾವಾಗಲೂ ಹೊಸ ಲುಕ್‌ನಲ್ಲಿ ಕಾಣಿಸಿಕೊಳ್ಳುವ ದೀಪಿಕಾ ಅವರ ಈ ಲುಕ್‌ಗೆ ಬಾಲಿವುಡ್ ಮಂದಿ ಶಾಕ್ ಆಗಿರುವುದಂತು ಸುಳ್ಳಲ್ಲ.
ರಣವೀರ್ ಸಿಂಗ್ ಅವರು ಮುಂಬರಲಿರುವ ಚಿತ್ರವಾದ ಸಿಂಬಾದಲ್ಲಿ ಪೋಲೀಸ್ ಪಾತ್ರದಲ್ಲಿ ಬಣ್ಣ ಹಚ್ಚಿರುವುದು ನಿಮಗೆಲ್ಲಾ ತಿಳಿದಿರುವುದೇ. ಆದರೆ ಅವರ ಪೋಸ್ಟ್‌ಗಿಂತ ದೀಪಿಕಾ ಅವರ ಈ ಪೋಲಿಸ್ ಫೋಟೋ ಚೆನ್ನಾಗಿದ್ದು ರಣವೀರ್ ಸಿಂಗ್ ಅವರಿಗಿಂತ ದೀಪಿಕಾ ಫೋಟೋ ಚೆನ್ನಾಗಿದೆ ಎಂಬ ಮಾತುಗಳು ಬಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿವೆ. ಅಂದ ಹಾಗೆ ಈ ಜೋಡಿ ಒಟ್ಟಿಗೆ ನಟಿಸಿರುವ ಪದ್ಮಾವತ್ ಜನವರಿ 25 ಕ್ಕೆ ಬಿಡುಗಡೆಯಾಗುವುದು ಕನ್‌ಫರ್ಮ್ ಆಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.