Select Your Language

Notifications

webdunia
webdunia
webdunia
Wednesday, 9 April 2025
webdunia

ಪದ್ಮಾವತ್ ರಿಲೀಸ್ ಗೆ ಮುನ್ನ ಸಿದ್ಧಿವಿನಾಯಕನ ಮೊರೆ ಹೋದ ದೀಪಿಕಾ ಪಡುಕೋಣೆ

ದೀಪಿಕಾ ಪಡುಕೋಣೆ
ಮುಂಬೈ , ಮಂಗಳವಾರ, 23 ಜನವರಿ 2018 (16:46 IST)
ಮುಂಬೈ: ಬಾಲಿವುಡ್ ಮಂದಿಯೆಲ್ಲಾ ಹೆಚ್ಚಾಗಿ ಸಂಕಟ ಬಂದರೆ ಹೋಗುವ ದೇವಾಲಯವೆಂದರೆ ಮುಂಬೈನ ಸಿದ್ಧಿವಿನಾಯಕ ಮಂದಿರ. ಇದೀಗ ಬಾಲಿವುಡ್ ತಾರೆ ದೀಪಿಕಾ ಪಡುಕೋಣೆಯೂ ಅದೇ ಕೆಲಸ ಮಾಡಿದ್ದಾರೆ.
 

ದೀಪಿಕಾ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ಪದ್ಮಾವತ್ ಸಿನಿಮಾ ಬಿಡುಗಡೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಕೆಲ ಸಂಘಟನೆಗಳು ದೀಪಿಕಾಗೆ ಜೀವ ಬೆದರಿಕೆಯನ್ನೂ ಹಾಕಿತ್ತು.

ಇದೆಲ್ಲದರ ನಡುವೆ ಚಿತ್ರ ಬಿಡುಗಡೆಯಾಗುತ್ತಿರುವ ಹಿನ್ನಲೆಯಲ್ಲಿ ದೀಪಿಕಾ ಸಿದ್ಧಿವಿನಾಯಕ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಹಾಗೂ ಚಿತ್ರಕ್ಕೆ ಯಾವುದೇ ವಿಘ್ನ ಬಾರದಂತೆ ದೇವರಲ್ಲಿ ಬೇಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ದೀಪಿಕಾಗೆ ಬಿಗಿ  ಪೊಲೀಸ್ ಭದ್ರತೆ ಒದಗಿಸಲಾಗಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬುಲ್ ಬುಲ್ ನಟಿ ರಚಿತಾ ರಾಮ್ ರಾಜಕೀಯಕ್ಕೆ ಎಂಟ್ರಿ ಕೊಡ್ತಾರಂತೆ!