Publish Date: Thu, 25 Jan 2018 (10:26 IST)
Updated Date: Thu, 25 Jan 2018 (10:28 IST)
ನವದೆಹಲಿ: ಪದ್ಮಾವತ್ ಸಿನಿಮಾ ಬಿಡುಗಡೆ ವಿರೋಧಿಸಿ ಗುರ್ ಗಾಂವ್ ನಲ್ಲಿ ಶಾಲಾ ಬಸ್ ಒಂದಕ್ಕೆ ಬೆಂಕಿ ಹಚ್ಚಿರುವ ಘಟನೆಯನ್ನು ಖಂಡಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬಿಜೆಪಿಯಿಂದಾಗಿ ದೇಶಕ್ಕೇ ಬೆಂಕಿ ಬಿದ್ದಿದೆ ಎಂದಿದ್ದಾರೆ.
‘ಮಕ್ಕಳ ಮೇಲಿನ ದೌರ್ಜನ್ಯವನ್ನು ಸಮರ್ಥಿಸಲು ಯಾವುದೇ ಕಾರಣಗಳಿಲ್ಲ. ಬಿಜೆಪಿ ದೇಶದೆಲ್ಲೆಡೆ, ಧ್ವೇಷ, ಹಿಂಸೆ ಹರಡುತ್ತಿದೆ. ದೇಶವೇ ಈ ಬೆಂಕಿಯಲ್ಲಿ ಉರಿಯುತ್ತಿದೆ’ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕಿಡಿ ಕಾರಿದ್ದಾರೆ.
ಪದ್ಮಾವತ್ ಸಿನಿಮಾ ಇಂದು ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ ರಜಪೂತ ವೀರ ಮಹಿಳೆ ಪದ್ಮಾವತಿಯನ್ನು ಅವಹೇಳನಕಾರಿಯಾಗಿ ಚಿತ್ರಿಸಲಾಗಿದೆ ಎಂದು ಕೆಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಲೇ ಇವೆ. ಇವೆಲ್ಲದರ ಮಧ್ಯೆ ಇಂದು ಚಿತ್ರ ಬಿಡುಗಡೆಯಾಗಿದೆ. ಇದನ್ನು ವಿರೋಧಿಸಿ ನಿನ್ನೆ ಪ್ರತಿಭಟನಾಕಾರರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಗುರ್ ಗಾಂವ್ ನಲ್ಲಿ ಕಿಡಿಗೇಡಿಗಳು ಶಾಲಾ ಮಕ್ಕಳಿದ್ದ ಬಸ್ ಗೆ ಬೆಂಕಿ ಹಚ್ಚಿದ ವಿಡಿಯೋ ಭಾರೀ ವೈರಲ್ ಆಗಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ