Select Your Language

Notifications

webdunia
webdunia
webdunia
webdunia

ಶಾರುಖ್ ಖಾನ್ ಗೆ ಶೀಘ್ರದಲ್ಲೇ ನಾಲ್ಕನೇ ಮಗು?!!

ಶಾರುಖ್ ಖಾನ್ ಗೆ ಶೀಘ್ರದಲ್ಲೇ ನಾಲ್ಕನೇ ಮಗು?!!
ಮುಂಬೈ , ಸೋಮವಾರ, 22 ಜನವರಿ 2018 (16:48 IST)
ಮುಂಬೈ: ಬಾಲಿವುಡ್ ಬಾದ್ ಶಹಾ ಶಾರುಖ್ ಖಾನ್ ಗೆ ಈಗಾಗಲೇ ಮೂವರು ಮಕ್ಕಳಿದ್ದಾರೆ. ಇದೀಗ 52 ವರ್ಷದ ಬಾಲಿವುಡ್ ಹೀರೋಗೆ ನಾಲ್ಕನೇ ಮಗುವಾಗುತ್ತಂತೆ!
 

ಹಾಗಂತ ಅವರೇ ಹೇಳಿಕೊಂಡಿದ್ದಾರೆ. ಆದರೆ ಇದೆಲ್ಲಾ ತಮಾಷೆಗಾಗಿ! ಶಾರುಖ್ ಖಾನ್ ಖಾಸಗಿ ವಾಹಿನಿಯೊಂದರಲ್ಲಿ ಇಂಡಿಯಾ ನಯೀ ಸೋಚ್ ಎನ್ನುವ ಕಾರ್ಯಕ್ರಮ ನಡೆಸಿಕೊಡುತ್ತಾರೆ. ಇದರಲ್ಲಿ ಆಕಾಂಕ್ಷ ಎನ್ನುವ ಸ್ಪರ್ಧಿಯೊಬ್ಬರ ಹೆಸರನ್ನು ಹೇಳಲು ಶಾರುಖ್ ಸಾಕಷ್ಟು ಟೇಕ್ ತೆಗೆದುಕೊಳ್ಳುತ್ತಿದ್ದರು.

ಈ ಸಂದರ್ಭದಲ್ಲಿ ಮುಜುಗರಪಟ್ಟುಕೊಂಡ ಶಾರುಖ್ ಈ ರೀತಿ ತಮಾಷೆ ಮಾಡಿದ್ದಾರೆ. ‘ನನಗೆ ಇದುವರೆಗೆ ಹೀಗೆ ಆಗಿರಲಿಲ್ಲ. ಬಹುಶಃ ಸದ್ಯದಲ್ಲೇ ನನಗೆ ನಾಲ್ಕನೇ ಮಗುವಾದರೆ ಅದಕ್ಕೆ ಆಕಾಂಕ್ಷ ಎಂದು ಹೆಸರಿಡುತ್ತೇನೆ’ ಎಂದು ಶಾರುಖ್ ತಮಾಷೆಯಾಗಿ ಹೇಳಿಕೊಂಡಿದ್ದಾರೆ. ಅವರ ಮಾತು ಕೇಳಿ ಅಭಿಮಾನಿಗಳು ಏನೇನೋ ಅಂದುಕೊಂಡರಂತೆ!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಯನತಾರಾಗೆ ಈ ನಟನೆಂದರೆ ಸಖತ್ ಇಷ್ಟವಂತೆ!