Select Your Language

Notifications

webdunia
webdunia
webdunia
webdunia

ನಯನತಾರಾಗೆ ಈ ನಟನೆಂದರೆ ಸಖತ್ ಇಷ್ಟವಂತೆ!

ನಯನತಾರಾಗೆ ಈ ನಟನೆಂದರೆ ಸಖತ್ ಇಷ್ಟವಂತೆ!
ಚೆನ್ನೈ , ಸೋಮವಾರ, 22 ಜನವರಿ 2018 (15:21 IST)
ಚೆನ್ನೈ : ಅಪಾರ ಅಭಿಮಾನಿಗಳ ಮನಸ್ಸು ಗೆದ್ದಿರುವ ದಕ್ಷಿಣ ಭಾರತದ ನಟಿ ನಯನತಾರ ಅವರಿಗೂ ಕೂಡ ಇಷ್ಟವಾದ ನಟರೊಬ್ಬರಿದ್ದು, ಅವರು ಯಾರು ಎಂಬ ರಹಸ್ಯವನ್ನು ಸ್ವತಃ ಅವರೇ ಬಿಚ್ಚಿಟ್ಟಿದ್ದಾರೆ.

 
ತಮಿಳುನಾಡಿನಲ್ಲಿ ಇತ್ತಿಚೆಗೆ ನಡೆದ ಅವಾರ್ಡ್ ಕಾರ್ಯಕ್ರಮಯೊಂದರಲ್ಲಿ  ಪಾಲ್ಗೊಂಡಿದ್ದ ನಯನತಾರ ಅವರು ತಮಿಳಿನ ಆರಮ್ ಚಿತ್ರದ ಅಭಿನಯಕ್ಕೆ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಆ ಸಮಯದಲ್ಲಿ ನಿಮ್ಮ ನೆಚ್ಚಿನ ನಟ ಯಾರು ಎಂದು ಕೇಳಿದ ಪ್ರಶ್ನೆಗೆ ಅವರು ತಾಲಾ ಅಜಿತ್ ತನ್ನ ನೆಚ್ಚಿನ ನಟ  ಎಂದು ಹೇಳಿದ್ದಾರೆ. ನಯನತಾರಾ ಹಾಗು ಅಜಿತ್ ಅವರು ಜೋಡಿಯಾಗಿ ಏಕಾನ್, ಬಿಲ್ಲಾ, ಆರಂಭಂ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರಿಬ್ಬರದ್ದು ತೆರೆಯ ಮೇಲೆ ಉತ್ತಮ ಜೋಡಿ ಎಂದು ಪ್ರೇಕ್ಷಕರು ಕೂಡ ಹೇಳುತ್ತಿದ್ದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಭಾವನಾ ಇನ್ನೀಗ ಕನ್ನಡದ ಸೊಸೆ